ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ತಾಲೂಕಿನ ಮಂಜನಾಡಿಯಲ್ಲಿರುವ ಮಲರಾಯ ಬಂಟ ದೈವಸ್ಥಾನದ ಲ್ಲಿ ತುಳು ಶಿಲಾಶಾಸನವೊಂದು ಪತ್ತೆಯಾಗಿದೆ. ದೈವಸ್ಥಾನದ ಧ್ವಜಸ್ತಂಭದ ಬುಡದಲ್ಲಿ ಒರಗಿಸಿಟ್ಟಿದ್ದ ಈ ಕಲ್ಲಿನಲ್ಲಿರುವ ಲಿಪಿಯನ್ನು ಯಾರೂ ಗಮನಿಸಿರಲಿಲ್ಲ. ಸೋಣ ತಿಂಗಳಲ್ಲಿ ಸಂಕ್ರಮಣದ ದಿವಸ ದೈವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕುಲಾಲ ಸಮುದಾಯದ ಲೇಖಕ, ಸಂಶೋಧಕ ಶಂಕರ ಕುಂಜತ್ತೂರು ಅವರು ಇದನ್ನು ಪತ್ತೆ ಹಚ್ಚಿದರು.
ಐದು ವರ್ಷಗಳ ಹಿಂದೆ ಕಿದೂರಿನ ಗದ್ದೆಯಲ್ಲಿ ಹುದುಗಿದ್ದ ತುಳು ಶಿಲಾಶಾಸನ ವನ್ನೂ ಇವರೇ ಪತ್ತೆ ಹಚ್ಚಿದ್ದರು. ಈ ಶಾಸನಗಳ ಲಿಪಿಯು ತುಳು ಲಿಪಿಯಾಗಿದ್ದು ಹೆಚ್ಚು ಸವೆದಿಲ್ಲ. ಈಗ ಪತ್ತೆಯಾದ ಲಿಪಿ ಅತ್ಯಂತ ಸ್ಪಷ್ಟ ವಾಗಿದೆ. ತುಳು ಲಿಪಿಯ ಚರಿತ್ರೆ ಮತ್ತು ಪ್ರಾದೇಶಿಕ ಇತಿಹಾಸದ ಅಧ್ಯಯನದ ದೃಷ್ಟಿಯಿಂದ ಈ ಶಾಸನಗಳು ಮಹತ್ವದ್ದಾಗಿದೆ. ದೈವಸ್ಥಾನದ ಆಡಳಿತದವರ ಅನುಮತಿಯ ಮೇರೆಗೆ ಶಾಸನ ತಜ್ಞರಾದ ಶುಭಾಸ್ ನಾಯಕ್, ಕೃಷ್ಣಯ್ಯ ಮತ್ತು ಡಾ.ರಾಧಾಕೃಷ್ಣ ಬೆಳ್ಳೂರು ಶಾಸನದ ಅಚ್ಚುಪ್ರತಿ ತೆಗೆದರು. ಸೂಕ್ಷ್ಮ ಅಧ್ಯಯನದ ಬಳಿಕ ಶಾಸನದ ವಿಷಯ ಬೆಳಕಿಗೆ ಬರಲಿದೆ. ದೈವಸ್ಥಾನದ ಆಡಳಿತದವರು, ಸಂಬಂಧ ಪಟ್ಟವರು ಶಾಸನ ಪತ್ತೆಯಾದ ಬಗ್ಗೆ ಕುತೂಹಲ ಮತ್ತು ಸಂತೋಷ ವ್ಯಕ್ತಪಡಿಸಿದ್ದಾರೆ.
ತುಳು ಶಿಲಾ ಶಾಸನ ಪತ್ತೆ ಹಚ್ಚಿದ ಸಂಶೋಧಕ ಶಂಕರ ಕುಂಜತ್ತೂರು
Kulal news
1 Min Read