ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜ ಸೇವಾ ಸಂಘ (ರಿ) ವಗ್ಗ ಇದರ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 15ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸತ್ಯನಾರಾಯಣ ಪೂಜೆಯು ನ. ೩ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಾ ಸಹಕಾರಿ ಬ್ಯಾಂಕ್ ,ಬಂಟ್ವಾಳ ಇದರ ಮಹಾಪ್ರಬಂಧಕಾದ ಶ್ರೀ ಬೋಜ ಮೂಲ್ಯ ಇವರು ನಮ್ಮ ಹಿರಿಯರು ಶ್ರದ್ದೆಯಿಂದ ಕಟ್ಟಿದ ಸಂಘವನ್ನು ಉಳಿಸಿ ಬೆಳೆಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮದಾಗಿದ್ದು ಅದನ್ನು ಅತ್ಯಂತ ಮುತುವರ್ಜಿಯಿಂದ ಮುಂದುವರಿಸಬೇಕೆಂದು ಹೇಳಿದರು.
ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಸ್ವಜಾತಿ ಭಾಂಧವರಿಗೆ ಮಣ್ಣಿನ ಕಲಾಕೃತಿ ,ಬೆಂಕಿ ಇಲ್ಲದೆ ಅಡಿಗೆ, ರಂಗೋಲಿ, ಸೂಜಿಗೆ ದಾರ ಹಾಕುವುದು, ನಿಂಬೆ ಚಮಚ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಯಿತು. ಮಕ್ಕಳಿಗೆ ಡ್ರಾಯಿಂಗ್ ಮತ್ತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಅದ್ಯಕ್ಷ ಶ್ರೀ ಜಯರಾಮ ಕುಲಾಲ ಉರುಡಾಯಿ, ಬಂಟ್ವಾಳ ತಾಲೂಕು ಯುವವೇದಿಕೆಯ ಅಧ್ಯಕ್ಷರಾದರ ಶ್ರೀ ಸುಕುಮಾರ ಬಂಟ್ವಾಳ, ಉದ್ಯಮಿ ಬೂಬ ಸಾಲ್ಯಾನ್ ,ಬಂಟ್ವಾಳ ಯುವವೇದಿಕೆಯ ಸಂಚಾಲಕರಾದ ಸತೀಶ್ ಜಕ್ರಿಬೆಟ್ಟು ಅಥಿತಿಗಳಾಗಿ ಉಪಸ್ಥಿತರಿದ್ದರು. ವನಿತಾ ಉಗ್ಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಜಾರಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು. ಯಶೋಧಾ ಜೆ ಬಂಗೇರ ಸ್ವಾಗತ ಭಾಷಣ ಮಾಡಿ ಕಾರ್ಯದರ್ಶಿ ಹರೀಶ ಕಾಡಬೆಟ್ಟು ವರದಿ ವಾಚಿಸಿದರು. ರೋಹಿತ್ ಅಗರ್ದಬೈಲು ಧನ್ಯವಾದ ನೀಡಿದರು.