ಕಿನ್ನಿಗೋಳಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ರಾಜ್ಯದ ಮೂಲೆ ಮೂಲೆಯಲ್ಲಿ ಯುವ ನಾಯಕರುಗಳು ಉತ್ಸಹದಿಂದ ಸಂಘಟನೆಯತ್ತ ಬರುವಂತೆ ಮಾಡಿದ ತೃಪ್ತಿ ನಮಗಿದೆ. ಇಂದು ಕುಂಬಾರ ಸಮುದಾಯದ ರಾಜ್ಯ ಮಟ್ಟದ ಹೋರಾಟದ ಕುಂಬಾರ ಧ್ವನಿ ಗಳಲ್ಲಿ ಯುವ ವೇದಿಕೆ ಮುಂಚೂಣಿಯಲ್ಲಿದೆ. ಈ ಸಾಧನೆ ಮಾಡಲು ಜೊತೆ ಕೈ ಜೋಡಿಸಿದ ಇದರ ಎಲ್ಲಾ ಹಿರಿ ಕಿರಿಯ ಕೇಂದ್ರ ರಾಜ್ಯ ವಿಬಾಗ ಜಿಲ್ಲೆ ಮತ್ತು ವಿಧಾನ ಸಭಾ ಪದಾಧಿಕಾರಿಗಳಿಗೆ ನಾನು ಆಬಾರಿ” ಎಂದು ಯುವ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀ ತೇಜಶ್ವಿರಾಜ್ ಹೇಳಿದರು.
ಕಿನ್ನಿಗೋಳಿಯ ಯುಗ ಪುರುಷ ಸಭಾಭವನದಲ್ಲಿ ಜರುಗಿದ ಕುಲಾಲ ಯುವ ವೇದಿಕೆ ಕಿನ್ನಿಗೋಳಿ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯುವ ವೇದಿಕೆ ಕಳೆದ ಹತ್ತು ವರ್ಷಗಳಲ್ಲಿ ಇಡೀ ರಾಜ್ಯ ಮಟ್ಟದ ಕುಲಾಲ್ ಕುಂಬಾರ ಜನಾಂಗ ಹೆಮ್ಮೆ ಪಡುವಂತಹ ಸಂಘಟನಾ ಕಾರ್ಯ ಮಾಡಿದೆ. ಪ್ಲಾಸ್ಟಿಕ್ ಮುಕ್ತ ಚಳುವಳಿ ಬಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕುಂಬಾರರ ಮಣ್ಣಿನ ಮಡಿಕೆಯ ಬೇಡಿಕೆ ಹೆಚ್ಚುತ್ತಿದ್ದು, ಕೇಂದ್ರ ಹಾಗು ರಾಜ್ಯ ಸರಕಾರಗಳು ಕುಂಭ ನಿಗಮದ ಮೂಲಕ ಕುಂಬಾರಿಕೆಗೆ ಮರುಹುಟ್ಟು ನೀಡಬೇಕು ಎಂದರು.
ಮುಖ್ಯ ಅತಿಥಿಗಳಲ್ಲಿ ಓರ್ವ ರಾದ ಯುಗಪುರುಷದ ಭುವನಾಭಿರಾಮ ಉಡುಪರು, ಕುಲಾಲ್ ಕುಂಬಾರ ಯುವ ವೇದಿಕೆ ಕೇವಲ ಜಾತಿ ಸಂಘಟನೆ ಯಾಗಿರದೇ, ಗೌಜಿ ಗದ್ದಲ ಇಲ್ಲದೇ ಸಮಾಜದ ಬೇರೆ ಬೇರೆ ಸಮುದಾಯದ ಜೊತೆ ನೋವು ನಲಿವು ಗಳಿಗೆ ಸ್ಪಂದಿಸುತ್ತಾ ಸಮಾಜದ ಮನಗೆದ್ದಿರುವುದು ಬಹು ದೊಡ್ಡ ಸಾಧನೆ, ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಹೋರಾಡಿ, ಧರಣಿ ಪ್ರತಿಭಟನೆ ಮೂಲಕ ಅದನ್ನ ಪ್ರಜಾಪ್ರಭುತ್ವ ರೀತಿ ನೀತಿಯಲ್ಲಿ ಪಡೆಯಲು ಹೊರಟಿರುವ, ಅದರಲ್ಲಿ ಯಶಸ್ಸು ಗಳಿಸಿರುವ ಸಂಘಟನೆ ಮೂಲ್ಕಿ ಮೂಡಬಿದ್ರಿ ವಿಧಾನ ಕ್ಷೇತ್ರದಲ್ಲಿ ಮತ್ತಷ್ಟು ಜಾಗೃತಿ ಮೂಡಿಸಿ ಬೆಳಗಲಿ ಎಂದು ನವರಾತ್ರಿಯ ಈ ಶುಭಗಳಿಗೆಯಲ್ಲಿ ಹಾರೈಸುತ್ತೇನೆ ಎಂದರು.
ಮುಖ್ಯ ಅತಿಥಿಗಳಲ್ಲಿ ಓರ್ವರಾದ, ಅತ್ಯುತ್ತಮ ಗಾಂಧಿ ಗ್ರಾಮ ಪ್ರಶಸ್ತಿ ವಿಜೇತ ಮನ್ನ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರೋಜಿನಿ ಕುಲಾಲ್ ಮಾತನಾಡಿ ಕುಲಾಲ್ ಕುಂಬಾರ ಯುವ ವೇದಿಕೆಯ ಕೆಲಸಗಳು ಇಡೀ ರಾಜ್ಯದಲ್ಲಿ ಶ್ಲ್ಯಾಘನೆಗೆ ಒಳಗಾಗಿದ್ದು. ಅಂತಹ ಒಂದು ಘಟಕ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಆಗುತ್ತಿರುವುದು ನನಗೆ ಹೆಮ್ಮೆ. ಸಂಘಟನೆಯಲ್ಲಿ ಮಹಿಳೆಯರನ್ನ ಸೇರಿಸಿಕೊಂಡು ಒಕ್ಕೂಟ ರಚನೆ ಯತ್ತ ಹೊರಟಿರುವುದು ಒಂದು ವಿಶಿಷ್ಟ ಸಾಧನೆ.ಈ ಸಂಘಟನೆಯ ಜೊತೆ ನಾವಿದ್ದೇವೆ ಎಂದರು.
ಕಿಲ್ಪಾಡಿ ಪಂಚಾಯತ್ ನ ಸದಸ್ಯ ನಾಗರಾಜ್ ಕುಲಾಲ್, ತೋಕೂರು ಕುಲಾಲ್ ಸಂಘದ ಮಾಜಿ ಕಾರ್ಯದರ್ಶಿ ರೇವತಿ ಕುಲಾಲ್ ಮುಂತಾದವರ ನೇತೃತ್ವದಲ್ಲಿ ಯುವಕರ ಮತ್ತು ಮಹಿಳಾ ನಾಯಕರುಗಳನ್ನ ಆರಿಸಲಾಯಿತು.
ಯುವ ವೇದಿಕೆಯ ದಕ ಜಿಲ್ಲಾ ಅಧ್ಯಕ್ಷ, ಸುರತ್ಕಲ್ ಕುಲಾಲ್ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಧಾಕರ್ ಕುಲಾಲ್ ಸರ್ವರನ್ನ ಸ್ವಾಗತಿಸುತ್ತಾ, ಯುವ ವೇಧಿಕೆ ತನ್ನ ಸಮಾಜಮುಖೀ ಕೆಲಸಗಳಿಂದ ಕರ್ನಾಟಕ ರಾಜ್ಯವಲ್ಲದೇ ಇಡೀ ದೇಶದಲ್ಲಿ ಒಂದು ಪ್ರತಿಷ್ಠಿತ ಯುವ ಸಂಘಟನೆಯಾಗಿ ಹೆಸರು ಮಾಡಿದೆ. ಮುಂಬರುವ ದಿನಗಳಲ್ಲಿ ದಕ ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತಷ್ಟು ಘಟಕಗಳನ್ನ ಸ್ಥಾಪಿಸಿ ಸಮುದಾಯದ ಸೇವೆಗೆ ಬಲಿಷ್ಠ ಧ್ವನಿಯಾಗಲಿದ್ದು. ಯುವ ವೇಧಿಕೆ ಕುಲಾಲ್ ಕುಂಬಾರ ಸಂಘಗಳು ಸಮಾಜದ ಮಠ ಮಂದಿರಗಳ ನಡುವಿನ ಕೊಂಡಿಯಾಗಲಿದೆ ಎಂದರು.
ಯುವ ವೇಧಿಕೆಯ ವಿಭಾಗ ಕಾರ್ಯದರ್ಶಿಯಾದ ದಿನಕರ ಅಂಚನ್ ಪ್ರಸ್ತಾವನೆಗೈಯ್ಯುತ್ತಾ ಹತ್ತು ವರ್ಷಗಳಲ್ಲಿ ಯುವ ವೇಧಿಕೆ ಬೆಳೆದು ಬಂದ ಬಗೆ, ಹೋರಾಟ ಮಾಡಿ ಸಮುದಾಯದ ಬೆಳವಣಿಗೆಗೆ ಬಡವರ ನೋವು ನಲಿವುಗಳಿಗೆ ಸಹಕರಿಸಿದ ರೀತಿ ನೀತಿ ಗಳನ್ನ ವಿವರಿಸಿದರು. ಸುಧಾಕರ್ ಕುಲಾಲ್ ಕಾರ್ಯಕ್ರಮವನ್ನ ಸಂಯೋಜಿಸಿ ನಿರ್ವಹಿಸಿ ವಂದಿಸಿದರು.