ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘದ 2018&19ನೇ ಸಾಲಿನ ವಾರ್ಷಿಕ ಮಹಾಸಭೆ, ಸಂಘದ ವೆಬ್ಸೈಟ್ ಉದ್ಘಾಟನೆ, ಮಾಣಿ ಶಾಖಾ ಕಟ್ಟದ 3ಡಿ ಅನಾವರಣ ಹಾಗೂ ಸನ್ಮಾನ ಕಾರ್ಯಕ್ರಮಗಳು ಸೆ.15ರಂದು ಪುತ್ತೂರು ಕೋ.ಆಪರೇಟಿವ್ ಟೌನ್ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ಸಂಘವು ಒಟ್ಟು ೯ ಶಾಖೆಗಳನ್ನು ಹೊಂದಿದ್ದು ೨೪,೨೩೪ ಮಂದಿ ಸದಸ್ಯರನ್ನು ಹೊಂದಿರುತ್ತದೆ. ರೂ.೨.೬೭ಕೋಟಿ ಪಾಲು ಬಂಡವಾಳ, ೧.೩೦ಕೋಟಿ ಕ್ಷೇಮ ನಿಧಿ, ೩೨.೩೪ಕೋಟಿ ಠೇವಣಾತಿ, ರೂ.೨೯.೦೯ಕೋಟಿ ಸಾಲ ನೀಡಿದ್ದು ರೂ.೨೯.೯೦ ಸಾಲ ಹೊರ ಬಾಕಿಯುತ್ತದೆ. ವರದಿ ವರ್ಷದಲ್ಲಿ ರೂ.೮೦,೬೨,೨೧೭&೬೯ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.೨೦ ಡಿವಿಡೆಂಡ್ ನೀಡಲಾಗುವುದು ಎಂದರು.
ಸಂಘದ ಎಲ್ಲಾ ಶಾಖೆಗಳನ್ನೂ ಸಂಪೂರ್ಣ ಗಣಕೀರಣಗೊಳಿಸಲಾಗಿದ್ದು ಸದಸ್ಯರಿಗೆ ಎಸ್ಎಂಎಸ್, ಆರ್ಟಿಜಿಎಸ್, ನೆಫ್ಟ್ ಸೌಲಭ್ಯಗಳು, ಸದಸ್ಯರಿಗೆ ವಿಮಾ ಸೌಲಭ್ಯ, ಭದ್ರತೆಯ ದೃಷ್ಠಿಯಿಂದ ಪ್ರತಿ ಶಾಖೆಗಳಲ್ಲೂ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ೪೦ಜನ ಕುಂಬಾರ ಕುಶಲಕರ್ಮಿಗಳೊಗೆ ಆಧುನಿಕ ಕುಂಬಾರಿಕಾ ಚಕ್ರ ಉಚಿತವಾಗಿ ನೀಡಲಾಗಿದೆ. ಸದಸ್ಯರ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ, ಪ್ರಥಮ ಬಾರಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿ ಗ್ರಾಮೀಣ ಜನರ ಅಭಿವೃದ್ಧಿಗೆ ಸಹಕಾರ ನೀಡುವುದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಯೋಜನೆಗಳು :
ಕುಂಬಾರಿಕೆ ಕೈಗಾರಿಕೆಯ ಬಗ್ಗೆ ಕುಶಲ ಕರ್ಮಿಗಳಿಗೆ ಹಾಗೂ ಸಿಬಂದಿಗಳಿಗೆ ವಿಶೇಷ ತರಬೇತಿ ನೀಡುವುದು, ಕುಂಬಾರಿಕೆಯ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವುದು, ಮಾಣಿ ಶಾಖೆಗೆ ಸುಸಜ್ಜಿತ ಕಟ್ಟಡವನ್ನು ರಚಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ಆರೋಗ್ಯ ಶಿಬಿರ, ಕುಂಬಾರಿಕೆ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಶೇ.೯ರ ಬಡ್ಡಿದರದಲ್ಲಿ ಸಾಲ, ಸದಸ್ಯರ ಮಕ್ಕಳಿಗೆ ವಿದ್ಯಾನಿಧಿಯಿಂದ ಶೇ.೪ರ ಬಡ್ಡಿದರದಲ್ಲಿ ಉನ್ನತ ಶಿಕ್ಷಣ ಸಾಲ, ಮೆಲ್ಕಾರ್ನಲ್ಲಿ ಶಾಖೆ ಪ್ರಾರಂಭ ಹಾಗೂ ಕುಂಬಾರಿಕೆಯ ಬಗ್ಗೆ ನಿರಂತರವಾಗಿ ಉಚಿತ ತರಬೇತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಹೇಳಿದರು.
ವೆಬ್ಸೈಟ್ ಉದ್ಘಾಟನೆ, 3ಡಿ ಅನಾವರಣ:
ಸಹಕಾರಿ ಸಂಘದ ನೂತನ ವೆಬ್ಸೈಟ್ ಹಾಗೂ ಮಾಣಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಾಖಾ ಕಟ್ಟಡದ ೩ಡಿಯನ್ನು ರಾಜ್ಯ ಹಣಕಾಸು ಇಲಾಖೆ ನಿವೃತ್ತ ಅಧಿಕಾರಿ ಎ.ಎಸ್ ರಾಮದಾಸ್ ಅನಾವರಣಗೊಳಿಸಿದರು.
ಸನ್ಮಾನ:
ಉಪನ್ಯಾಸಕ ಡಾ|ಚಂದ್ರಶೇಖರ, ಸುಭೇದಾರ್ ಶಿವಪ್ರಸಾದ್ ಕೆ.ಬಿ, ಕುಂಬಾರಿಕ ಕುಶಲ ಕರ್ಮಿಗಳಾದ ಡೊಂಬಯ್ಯ ಕುಂಬಾರ ಹಾಗೂ ಉಮ್ಮಪ್ಪ ಕುಂಬಾರ, ಸಿಬಂದಿ ಭವಾನಿ ಹಾಗೂ ನವೀನ್ ಕುಲಾಲ್ರವರನ್ನು ಸನ್ಮಾಸಲಾಯತು. ಕುಶಲ ಕರ್ಮಿಗಳಿಗೆ ಬೋನಸ್, ಸ್ವಾತಂತ್ರ್ಯ ದಿನದ ಅಂಗವಾಗಿ ಸಿಬಂದಿಗಳಿಗೆ ನಡೆಸಲಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ, ನಿತ್ಯನಿಧಿ ಸಂಗ್ರಾಹಕರು ಹಾಗೂ ಕುಶಲ ಕರ್ಮಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಾತ್ಯಕ್ಷಿಕೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಡೊಂಬಯ್ಯ ಕುಂಬಾರ ಹಾಗೂ ರಮೇಶ್ ಕುಲಾಲ್ ಕುಂಬಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಉಪಾಧ್ಯಕ್ಷ ಸಚ್ಚಿದಾನಂದ, ನಿರ್ದೇಶಕರಾದ ಬಿ.ಎಸ್ ಕುಲಾಲ್, ನಾರಾಯಣ ಕುಲಾಲ್, ನಾಗೇಶ ಕುಲಾಲ್, ಎಚ್.ಪದ್ಮಕುಮಾರ್, ಗಣೇಶ್ ಪಿ., ಪಿ.ಧರ್ಣಪ್ಪ ಮೂಲ್ಯ, ಹರೀಶ ಕೆ., ಶಿವಪ್ಪ ಮೂಲ್ಯ, ವಿ.ರೋಹಿಣಿ, ಜಯಶ್ರೀ ಎಸ್. ಹಾಗೂ ಯಶೋಧ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಜ್ಞಾ ಹಾಗೂ ಮೋಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಭಾಸ್ಕರ ಎಂ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ದಾಮೋದರ ಎ.ವಂದಿಸಿದರು.