(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಯುವಕರನ್ನು ತರಬೇತಿಗೊಳಿಸುವ ಸಂಸ್ಥೆಯೆಂದೇ ಪ್ರಸಿದ್ಧವಾಗಿರುವ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿ ಸಂಸ್ಥೆ ಇತ್ತೀಚೆಗೆ ಜೇಸಿಐ ಪುತ್ತೂರಿನ ಆತಿಥ್ಯದಲ್ಲಿ ಪುತ್ತೂರಿನ ಎಂ ಸುಂದರಂ ಶೆಟ್ಟಿ ಮೆಮೋರಿಯಲ್ ಬಂಟರ ಭವನದಲ್ಲಿ ನಡೆದ ಭಾರತೀಯ ಜೇಸಿಸ್ ನ ವಲಯ 15 ರ ಮುಂಗಾರು – ಮಧ್ಯಂತರ ಸಮ್ಮೇಳನದಲ್ಲಿ ನಡೆದ ಪರಿಣಾಮಕಾರಿ ಭಾಷಣ ಕಲೆ ಸ್ಪರ್ಧೆಯಲ್ಲಿ ಜೇಸಿಐ ಮುಂಡ್ಕೂರು ಭಾರ್ಗವದ ನಿಕಟಪೂರ್ವಾಧ್ಯಕ್ಷೆ ಅರುಣಾ ಕುಲಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಪ್ರಶಸ್ತಿಯನ್ನು ವಲಯ 15 ರ ವಲಯಾಧ್ಯಕ್ಷರಾದ ಜೆಎಫ್ ಪಿ ಅಶೋಕ್ ಚೂಂತಾರು ರವರು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು. ಈ ಸಂದರ್ಭ ವೇದಿಕೆಯಲ್ಲಿ ವಲಯದ ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿ ಸೆನೆಟರ್ ರಾಕೇಶ್ ಕುಂಜೂರು, ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಜೇಸಿ ಸಂದೀಪ್ ಕುಮಾರ್, ವಲಯ ಕಾರ್ಯದರ್ಶಿ ಜೇಸಿ ರಾಘವೇಂದ್ರ ಪ್ರಭು ಕರ್ವಾಲು, ಆಡಳಿತ ವಿಭಾಗದ ವಲಯ ನಿರ್ದೇಶಕ ಜೇಸಿ ಪ್ರಶಾಂತ್ ಕುಮಾರ್ ರೈ, ಇವೆಂಟ್ ಪ್ರಮೋಷನ್ ವಿಭಾಗದ ವಲಯ ಸಂಯೋಜಕ ಜೇಸಿಐ ಸೆನೆಟರ್ ಪಶುಪತಿ ಶರ್ಮಾ, ವಲಯ ಉಪಾಧ್ಯಕ್ಷರುಗಳಾದ ಜೇಸಿ ಅಬ್ದುಲ್ ಜಬ್ಬಾರ್, ಜೇಸಿ ದೇವೇಂದ್ರ ಪಾಟಾಲಿ, ಜೇಸಿ ಕಾರ್ತೀಕೇಯ ಮಧ್ಯಸ್ಥ, ಜೇಸಿ ಮಕರಂದ, ಜೇಸಿ ದೇವೇಂದ್ರ ನಾಯಕ್, ಜೇಸಿ ಜಯೇಶ್ ಬರೆಟ್ಟೋ, ಜೇಸಿ ರೋಯನ್ ಉದಯ್ ಕ್ರಾಸ್ತಾ, ಆತಿಥ್ಯ ಘಟಕದ ಘಟಕಾಧ್ಯಕ್ಷ ಜೇಸಿ ಗೌತಮ್ ರೈ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ(ದ.ಕ) ವಲಯ ಸಂಯೋಜಕ ಜೇಸಿ ಪುರುಷೋತ್ತಮ್, ಸಮ್ಮೇಳನ ಕಾರ್ಯದರ್ಶಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಜೇಸಿಐ ಮುಂಡ್ಕೂರು ಭಾರ್ಗವದ ಘಟಕಾಧ್ಯಕ್ಷ ಜೇಸಿ ದೇವಿ ಪ್ರಸಾದ್ ಆಚಾರ್ಯ, ಪೂರ್ವಾಧ್ಯಕ್ಷ ಹಾಗೂ ವಲಯ ತರಬೇತುದಾರ ಪ್ರಸ್ತುತ ವಲಯಾಧಿಕಾರಿ ಜೆ ಎಫ್ ಎಮ್ ಗಿರೀಶ್ ಎಸ್ ಪಿ, ಘಟಕದ ಉಪಾಧ್ಯಕ್ಷೆ ಜೇಸಿ ವಿಜಯಲಕ್ಷ್ಮೀ, ಜೇಸಿ ಅಶ್ವಿನಿ, ಜೇಸಿರೇಟ್ ರಾಜೇಶ್ವರಿ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.

