ಮಂಗಳೂರು(ಏ.೧೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅರೆಬರೆ ಬಟ್ಟೆ ಉಟ್ಕೊಂಡು ಬೇಕಾಬಿಟ್ಟಿ ಟಿಕ್ ಟಾಕ್ ಮಾಡುವವರ ನಡುವೆ ಲಕ್ಷಣವಾಗಿ ಸೀರೆ ಉಟ್ಕೊಂಡು ಚೆಂದ ಕಾಣಿಸುತ್ತಿರುವ ಈ ಹುಡುಗಿ ಈಗ ಟಿಕ್ ಟಾಕ್ ನಲ್ಲಿ ಭಾರೀ ಫೇಮಸ್ ಆಗಿದ್ದಾಳೆ..ಈಕೆ ಟಿಕ್ ಟಾಕ್ ನಲ್ಲಿ ನೂರಾರು ವೀಡಿಯೋ ಅಪ್ಲೋಡ್ ಮಾಡಿದ್ದರೂ ಕುಂದಾಪ್ರ ಕನ್ನಡದ `ಹ್ವಾಯ್ ..ಬನ್ಯೇ ಉಂಬಾಕ್ ಹೋಪ’ ಎಂಬ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಅಪ್ಲೋಡ್ ಮಾಡಿದ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಈಕೆಯ ವೀಡಿಯೊ ವೀಕ್ಷಿಸಿ ಶಹಬ್ಬಾಸ್ ಹೇಳಿದ್ದಾರೆ. ಒಬ್ಬರಂತೂ `ಎಬ್ಯೆ ಯಾರ್ ಹೆತ್ ಹೆಣ್ ಅಕ್ಕನೇ ನೀನ್.. ಒಂದ್ ದಿನದಲ್ ಈ ನಮನಿ ಸುದ್ದಿ ಮಾಡ್ಬಿಟ್ಟಿಯಲ್ಲೆ’ ಎಂದು ಚಕಿತ ವ್ಯಕ್ತಪಡಿಸಿ ಹಲವಾರು ಗ್ರೂಪ್ ಗಳಿಗೆ ವಿಡಿಯೋ ಶೇರ್ ಮಾಡಿದ್ದಾರೆ.
ಅಂದ ಹಾಗೆ, ನೋಡಲು ಸ್ವಲ್ಪ ಸಿನಿಮಾ ನಟಿ ರಚಿತಾ ರಾಮ್ ರನ್ನು ಹೋಲುವ ಈಕೆ ಹೆಸರು ಕವನ. (ಕವನ ಜಾಗ್ವಾರ್ ಎಂಬ ಹೆಸರಿನಲ್ಲಿ ಫೇಮಸ್). ಪಕ್ಕಾ ಕುಂದಾಪುರದ ಈ ಹುಡುಗಿಗೆ ಟಿಕ್ ಟಾಕ್ ನಲ್ಲಿ 58 ಸಾವಿರಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಗಳಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ, ಕುಲಾಲ ಸಮುದಾಯದ ಈಕೆ, ಮೊನ್ನೆಯಷ್ಟೇ ತನ್ನ ಸ್ನೇಹಿತೆ ವೀಟಾ ಅವರ ಮದುವೆಯ ದಿನದಂದು ಮಾಡಿರುವ `ಹ್ವಾಯ್ ..ಬನ್ಯೇ ಉಂಬಾಕ್ ಹೋಪ’ ಟಿಕ್ ಟಾಕ್ ಹಾಡು ಸದ್ದು ಮಾಡಿದ್ದು, ಹಲವು ಮಂದಿಗೆ ಇಷ್ಟವಾಗಿದೆ.
https://www.youtube.com/watch?v=eI2M0dbu2FA
ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ಕವನ ಅವರು, ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ಹುಣಸೆಮಕ್ಕಿಯ ಎಸ್ ಬಿ ನಾಗರಾಜ್ ಕುಲಾಲ್ ಮತ್ತು ಜ್ಯೋತಿ ದಂಪತಿಯ ಸುಪುತ್ರಿಯಾಗಿದ್ದಾರೆ.



