ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕ್ರೀಡಾ ಸಾಧಕಿ ಗೀತಾ ಕುಲಾಲ್ ಅವರನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇನ್ನಂಜೆ ಸುಂದರ ಮೂಲ್ಯ ಅವರ ಧರ್ಮಪತ್ನಿಯಾಗಿರುವ ಗೀತಾ ಅವರು ಶಿರ್ವ ಎಂ ಆರ್ ಎಸ್ ಕಾಲೇಜಿನ ಕಚೇರಿಯ ಸಹಾಯಕಿಯಾಗಿದ್ದು, ವಿವಿಧೆಡೆ ನಡೆದ ಓಟದ ಸ್ಪರ್ಧೆ, ಜಾವೆಲಿನ್ ಎಸೆತ , ಹ್ಯಾಮರ್ ಎಸೆತ , ಡಿಸ್ಕಸ್ ಎಸೆತ, ಎತ್ತರ ಜಿಗಿತ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಅಲ್ಲದೇ ಕ್ರೀಡೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.


