ಕಾರ್ಕಳ(ಫೆ.15,ಕುಲಾಲ್ ವರ್ಲ್ಡ್ ಡಾಟ್ ಕಾಮ್): ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಕ್ಷೇತ್ರ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಇದರ ಜಂಟಿ ಸಹಯೋಗದಲ್ಲಿ 26ನೇ ವರ್ಷದ ರಾಜ್ಯಮಟ್ಟದ “ಜ್ಞಾನ ಗಂಗೆ ಜ್ಞಾನ ತುಂಗೆ” ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಧಾರಿಸಿದ ನಡೆಸಿದ ಸ್ಪರ್ಧೆಗಳಲ್ಲಿ ಕು. ಶ್ವೇತಾ ಕುಲಾಲ್ ರವರು ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸಾಣೂರಿನ ಸರಕಾರಿ ಫ್ರೌಢ ಶಾಲೆಯ ಎಂಟನೆ ವಿದ್ಯಾರ್ಥಿನಿಯಾಗಿದ್ದು, ಇರ್ವತ್ತೂರು ಪೊಸಲಾಯಿ ಮನೆಯ ಶ್ರೀಮತಿ ಅನಿತಾ ಹಾಗೂ ಶ್ರೀ ನಾಗೇಶ್ ಕುಲಾಲ್ ದಂಪತಿಗಳ ಸುಪುತ್ರಿ.
ರಾಜ್ಯಮಟ್ಟದ ಶ್ಲೋಕ ಕಂಠಪಾಠ ಸ್ಪರ್ಧೆ: ಇರ್ವತ್ತೂರಿನ ಶ್ವೇತಾ ಕುಲಾಲ್ ಪ್ರಥಮ
Students corner
1 Min Read


