ಸೌರ ವಿದ್ಯುತ್ ಬಳಸಿ ಚಕ್ರ ತಿರುಗಿಸುವ, ಮಣ್ಣು ಹದಗೊಳಿಸುವ, ಪ್ರಮಾಣಬದ್ಧವಾಗಿ ಬೆರೆಸುವ, ಸಿದ್ಧಗೊಂಡ ನಿರ್ಮಿತಿಗಳನ್ನು ಬೇಯಿಸುವ ಮುಂತಾದ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನ, ಆಧುನಿಕ ಚಿಂತನೆ, ಪರಿಷ್ಕಾರವನ್ನು -ಸೌರವಿದ್ಯುತ್-ಅಳವಡಿಸಿಕೊಂಡ ಕುಂಬಾರಿಕೆಯ ಒಂದು ಕೇಂದ್ರ ಆಲೂರಿನ ಗುರುವಂದನಾ ಪೋಟರಿ ಪ್ರಾಡಕ್ಟ್ನ್ನು ದಾಖಲೀಕರಣಕ್ಕಾಗಿ ಗುರುತಿಸಲಾಗಿತ್ತು. ಈ ಸಂಸ್ಥೆಯ ಮಾಲಕ ರಘುರಾಮ ಕುಲಾಲ್(44 ವ.). ಇವರಿಗೆ ಪತ್ನಿ ಪಾರ್ವತಿ ಅಲ್ಲದೇ ಇಬ್ಬರು ಹೆಣ್ಣು ಮಕ್ಕಳಾದ ಬಿ.ಎ. ಪದವೀಧರೆ ಸುಜಾತಾ ಹಾಗೂ ಎಸೆಸ್ಸೆಲ್ಸಿ ಕಲಿತ ಕವಿತಾ ಸಹಾಯಕರಾಗಿ ದುಡಿಯುತ್ತಿದ್ದಾರೆ.
ಉಡುಪಿ(ಜ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಣಿಪಾಲ ಮಾಹೆ ಅಧೀನದ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಸಾಂಪ್ರದಾಯಿಕ ಕುಂಬಾರಿಕೆ ಮತ್ತು ತಂತ್ರಜ್ಞಾನ- ಸೌರ ವಿದ್ಯುತ್ ಬಳಸುವ ಕುಂಬಾರಿಕೆಯ ದಾಖಲೀಕರಣವು ಕುಂದಾಪುರ ತಾಲೂಕಿನ ಆಲೂರಿನಲ್ಲಿ ನಡೆಯಿತು.
ಸಾಂಪ್ರದಾಯಿಕ ಕುಂಬಾರಿಕೆ ಈಗಲೂ ಅಲ್ಲಲ್ಲಿ ಉಳಿದುಕೊಂಡಿದೆ. ಆದರೆ ಪರಿಶ್ರಮದ ಕಾಯಕ ಮತ್ತು ಮಣ್ಣಿನ ನಿತ್ಯೋಪಯೋಗಿ ಪಾತ್ರೆಗಳಿಗೆ ಬೇಡಿಕೆ ಕುಸಿಯುತ್ತಿರುವುದರಿಂದ ಈ ವಿಧಾನದಲ್ಲಿ ಮಣ್ಣಿನ ಸಾಮಗ್ರಿಗಳ ನಿರ್ಮಾಣ ಕಾರ್ಯ ನೇಪಥ್ಯಕ್ಕೆ ಸರಿಯುತ್ತಿದೆ.
ಆದರೆ ಇದೀಗ ಸೌರ ವಿದ್ಯುತ್ ಬಳಸಿ ಚಕ್ರ ತಿರುಗಿಸುವ, ಮಣ್ಣು ಹದ ಗೊಳಿಸುವ, ಪ್ರಮಾಣಬದ್ಧವಾಗಿ ಬೆರೆಸುವ, ಸಿದ್ಧಗೊಂಡ ನಿರ್ಮಿತಿಗಳನ್ನು ಬೇಯಿಸುವ ಮುಂತಾದ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನ, ಆಧುನಿಕ ಚಿಂತನೆ, ಪರಿಷ್ಕಾರವನ್ನು -ಸೌರವಿದ್ಯುತ್-ಅಳವಡಿಸಿಕೊಂಡ ಕುಂಬಾರಿಕೆಯ ಒಂದು ಕೇಂದ್ರ ಆಲೂರಿನ ಗುರುವಂದನಾ ಪೋಟರಿ ಪ್ರಾಡಕ್ಟ್ನ್ನು ದಾಖಲೀಕರಣ ಕ್ಕಾಗಿ ಗುರುತಿಸಲಾಗಿತ್ತು.
ಆದರೆ ಇದೀಗ ಸೌರ ವಿದ್ಯುತ್ ಬಳಸಿ ಚಕ್ರ ತಿರುಗಿಸುವ, ಮಣ್ಣು ಹದಗೊಳಿಸುವ, ಪ್ರಮಾಣಬದ್ಧವಾಗಿ ಬೆರೆಸುವ, ಸಿದ್ಧಗೊಂಡ ನಿರ್ಮಿತಿಗಳನ್ನು ಬೇಯಿಸುವ ಮುಂತಾದ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನ, ಆಧುನಿಕ ಚಿಂತನೆ, ಪರಿಷ್ಕಾರವನ್ನು -ಸೌರವಿದ್ಯುತ್-ಅಳವಡಿಸಿಕೊಂಡ ಕುಂಬಾರಿಕೆಯ ಒಂದು ಕೇಂದ್ರ ಆಲೂರಿನ ಗುರುವಂದನಾ ಪೋಟರಿ ಪ್ರಾಡಕ್ಟ್ನ್ನು ದಾಖಲೀಕರಣಕ್ಕಾಗಿ ಗುರುತಿಸಲಾಗಿತ್ತು. ಈ ಸಂಸ್ಥೆಯ ಮಾಲಕ ರಘುರಾಮ ಕುಲಾಲ್(44 ವ.). ಇವರಿಗೆ ಪತ್ನಿ ಪಾರ್ವತಿ ಅಲ್ಲದೇ ಇಬ್ಬರು ಹೆಣ್ಣು ಮಕ್ಕಳಾದ ಬಿ.ಎ. ಪದವೀಧರೆ ಸುಜಾತಾ ಹಾಗೂ ಎಸೆಸ್ಸೆಲ್ಸಿ ಕಲಿತ ಕವಿತಾ ಸಹಾಯಕರಾಗಿ ದುಡಿಯುತ್ತಿದ್ದಾರೆ.
ಇದಕ್ಕಾಗಿ ಬೇರೆ ಬೇರೆ ತರಬೇತಿಗಳನ್ನು ಪಡೆದಿರುವ ರಘುರಾಮ, ಮನೆ ವಾರ್ತೆ ಬಳಕೆಯ ಪಾತ್ರೆಗಳನ್ನು ಸಿದ್ಧಪಡಿಸುವುದರೊಂದಿಗೆ ಮಣ್ಣಿನ ಅಲಂಕಾರಿಕ ನಿರ್ಮಿತಿಗಳನ್ನು ಸಹ ಮಾಡುತ್ತಾರೆ. ಇವುಗಳನ್ನೆಲ್ಲ ತನ್ನ ಕೆಲಸದ ಸ್ಥಳದ ಪಕ್ಕದಲ್ಲೆ ಒಂದು ಕೋಣೆಯಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದಾರೆ. ‘ಪ್ರವಾಸಿಗರು ಬರುತ್ತಾರೆ, ಆಸಕ್ತರೂ ಆಗಮಿಸುತ್ತಾರೆ, ಹಾಗೆಯೇ ಕೆಲವೊಮ್ಮೆ ಖರೀದಿಸುತ್ತಾರೆ’ ಎಂದು ರಘುರಾಮ ಹೇಳುತ್ತಾರೆ. ಪಾತ್ರೆ ತಯಾರಿಗೆ ಆವೆಮಣ್ಣು ಪ್ರಧಾನವಾಗಿ ಬಳಕೆಯಾಗುತ್ತದೆ. ಜೇಡಿ ಮಣ್ಣು ಮತ್ತು ಹಳದಿಮಣ್ಣುಗಳನ್ನು ಸಹ ಅಗತ್ಯಕ್ಕೆ ಬೇಕಾದಂತೆ ಉಪಯೋಗಿಸಿಕೊಳ್ಳಲಾಗುತ್ತದೆ ಎಂದವರು ವಿವರಿಸುತ್ತಾರೆ.
ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ.ಹರೀಶ್ ಹಂದೆ ಅವರ ಸೆಲ್ಕೊ ಫೌಂಡೇಶನ್, ಕುಂಭಕಲೆಯನ್ನು ಉಳಿಸಲು ಮತ್ತು ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವವರ ಜೀವನ ಮಟ್ಟವನ್ನು ಎತ್ತರಿಸಲು ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿ ಕೊಟ್ಟು,ಮಣ್ಣನ್ನು ಹದಮಾಡಲು ಸೋಲಾರ್ ಬ್ಲಂಜರ್, ಪಗ್ಮಿಲ್, ಕುಂಬಾರಿಕೆಗೆ ಮುಖ್ಯವಾದ ಸೋಲಾರ್ ಚಾಲಿತ ಚಕ್ರಗಳನ್ನು ಅಳವಡಿಸಿಕೊಟ್ಟಿದ್ದಾರೆ. ಬೇಯಿಸಲು ಕಡಿಮೆ ಇಂಧನ ಸಾಕಾಗುವ ಕಾರ್ಯಕ್ಷಮತೆಯ ಕಿಲನ್ (ಭಟ್ಟಿ)ಗಳನ್ನು ಜೋಡಿಸಿಕೊಟ್ಟಿದ್ದಾರೆ ಎಂದೂ ರಘುರಾಮ ಕುಲಾಲ್ ತಿಳಿಸಿದರು.
ರಘುರಾಮ ಕುಲಾಲ್ ದೇವಾಲಯಗಳಿಗೆ ಬೇಕಾಗುವ ಕಲಶಗಳನ್ನು ಸಹ ತಯಾರಿಸುತ್ತಾರೆ. ಹಾಲಿಗೆ, ಮೊಸರಿಗೆ, ಪದಾರ್ಥಗಳನ್ನು ಮಾಡಲು ಹೀಗೆ ಅಗತ್ಯ ಮಣ್ಣಿನ ಪಾತ್ರೆಗಳನ್ನು ಮಾಡುವ ರಘುರಾಮ ಅವರು ನೀರಿನ ಜಗ್, ನೀರಿನ ಲೋಟ, ಜ್ಯೂಸ್ ಕಪ್, ಟೀಕಪ್, ಗೂಡು ದೀಪಗಳನ್ನು, ನೀರಿನ ಗಡಿಗೆ, ಧೂಪದ ಅಂಡಿಗೆ, ಹೂದಾನಿ ಮುಂತಾದು ುಗಳನ್ನು ಸಹ ತಯಾರಿಸುತ್ತಾರೆ. ತಮ್ಮ ದುಡಿತಕ್ಕೆ ಸರಿಯಾದ ಪ್ರತಿಫಲ ಇದೆ ಎನ್ನುತ್ತಾರೆ ಕುಲಾಲ್. ಆಧುನಿಕ ತಂತ್ರಜ್ಞಾನದ ಬಳಕೆ ಕೆಲಸಕ್ಕೆ ವೇಗವನ್ನು ಮತ್ತು ಉತ್ಸಾಹವನ್ನು ಕೊಡುತ್ತಿದೆ. ಸೆಲ್ಕೊದ ಇಂಜಿನಿಯರ್ ಕಿಶೋರ್ ಸೋಲಾರ್ ಚಾಲಿತ ಯಂತ್ರಗಳ ವಿವರಣೆಯನ್ನು ನೀಡಿದರು.
ಆಲೂರಿನ ಧೂಮನಪಾಲು ಎಂಬಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಎಂದರೆ ಚಕ್ರವನ್ನು ಕೈಯಲ್ಲಿ ತಿರುಗಿಸಿ ಮಡಕೆ, ಕುಡಿಕೆಗಳನ್ನು ಮಾಡು ಕ್ರಮವನ್ನು ಮುತ್ತ ಕುಲಾಲ್ -ಲಕ್ಷ್ಮೀ ದಂಪತಿ ಮಾಡಿತೋರಿಸಿದರು. ಪೂರ್ವ ಸಂಪ್ರದಾಯದಂತೆ ಬೇಯಿಸುವ, ಭಟ್ಟಿಯಲ್ಲಿ ಮಡಕೆ ಕುಡಿಕೆಗಳನ್ನು ಜೋಡಿಸುವ, ಜೋಡಿಸಿದ ಬಳಿಕ ಅದನ್ನು ಬೈ ಹುಲ್ಲಿನಿಂದ ಮುಚ್ಚಿ ಮೇಲೆ ಮಣ್ಣನ್ನು ಮೆತ್ತಿ ಬೆಂಕಿಹಾಕಿ ಬೇಯಿಸುವ ಹಂತಗಳನ್ನು ನರಸಿಂಹ ಕುಲಾಲ್-ಗಿರಿಜಾ ದಂಪತಿ ಮಾಡಿದ್ದನ್ನು ಸಹ ಕೇಂದ್ರ ವತಿಯಿಂದ ದಾಖಲಿಸಿಕೊಳ್ಳಲಾಯಿತು.
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಅವರ ಮಾರ್ಗದರ್ಶನದಲ್ಲಿ ದಾಖಲಾತಿ ನಡೆಯಿತು. ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ದಾಖಲಾತಿಯನ್ನು ನಿರ್ವಹಿಸಿದರು. ಕೇಂದ್ರದ ಲಚ್ಚೇಂದ್ರ ಅವರು ವೀಡಿಯೋ ದಾಖಲೀಕರಣ ಮಾಡಿಕೊಂಡರು.