ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇವರ ವತಿಯಿಂದ ಕರಾವಳಿ ಕಲೋತ್ಸವ-೨೦೧೮ ಇದರ ಅಂಗವಾಗಿ ನಡೆದ ತಾಲೂಕು ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ವಿಟ್ಲದ ವೈಶಾಲಿ ಕುಲಾಲ್ ಅವರು ಉತ್ತಮ ನಾಯಕ ನಟಿ ಪಡೆದಿದ್ದಾರೆ.
ಕಲಾನಿಧಿ ಕಲಾವಿದೆರ್ ನಾವೂರು ನಾಟಕ ತಂಡದ ಕಲಾವಿದೆಯಾಗಿರುವ ವೈಶಾಲಿ ಕುಲಾಲ್ ಅವರು ದಿನೇಶ್ ಸಾಲಿಯಾನ್ ರಚಿಸಿ ನಿರ್ದೇಶಿಸಿರುವ “ಗುರುವಪ್ಪಗ್ ಗುರುವಾರ” ಎಂಬ ನಾಟಕದ ನಟನೆಗೆ ಈ ಪ್ರಶಸ್ತಿ ಲಭಿಸಿದೆ. ಸುಮಾರು ಎಂಟಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ “ಗುರುವಪ್ಪಗ್ ಗುರುವಾರ” ನಾಟಕದಲ್ಲಿ ಕುರುಡಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿ ತೀರ್ಪುಗಾರರ ಮನಗೆದ್ದ ವೈಶಾಲಿ ಅವರು ವಿಟ್ಲ ಅಡ್ಯನಡ್ಕ ಅಮೈ ನಿವಾಸಿ ನಾರಾಯಣ ಕುಲಾಲ್ ಮತ್ತು ಮಾಲತಿ ದಂಪತಿಯ ಸುಪುತ್ರಿಯಾಗಿದ್ದಾರೆ.






