ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಭೂಸೇನೆಯ ನಿವೃತ್ತ ಸುಭೇದಾರ್ ಜೆ. ರುಕ್ಮಯ್ಯ (97 ವರ್ಷ)ಅವರು ಅಲ್ಪಕಾಲದ ಅಸೌಖ್ಯದಿಂದ ಜ.೧೨ರಂದು ಮುಂಜಾನೆ ಅವರ ಎಡಪದವಿನಲ್ಲಿರುವ ನಿವಾಸದಲ್ಲಿ ವಿಧಿವಶರಾದರು.
1921ನೇ ಇಸವಿಯಲ್ಲಿ ಜನಿಸಿದ್ದ ರುಕ್ಮಯ್ಯ ಅವರು ಭಾರತೀಯ ಭೂಸೇನೆಯಲ್ಲಿ ಸುಭೇದಾರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮನುಕುಲವನ್ನೇ ನಡುಗಿಸಿದ 1939 ರಿಂದ 1945ರವರೆಗೆ ನಡೆದ ಮಹಾಯುದ್ಧದಲ್ಲಿ ಭಾಗವಹಿಸಿ ದೇಶದ ರಕ್ಷಣೆಗೆ ಸಲ್ಲಿಸಿದ ಸೇವೆ ಅವರ ಸೇವಾವಧಿಯಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದೆ. ಇವರು ಪುತ್ರ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸದಸ್ಯ ಆರ್ ಕೆ ಪ್ರಥ್ವಿರಾಜ್ ಸಹಿತ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಜ.೧೨ರಂದು ಸಂಜೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.