ಬೆಳ್ಮಣ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಾಜಸ್ಥಾನದ ಜೈಪುರದಲ್ಲಿ ಜರುಗಿದ 63ನೇ ರಾಷ್ಟ್ರೀಯ ಅಧಿವೇಶನದಲ್ಲಿ ಅರುಣಾ ಕುಲಾಲ್ ಅಧ್ಯಕ್ಷರಾಗಿರುವ ಜೇಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ ದೀರ್ಘ ಕಾಲೀನ ಸಮುದಾಯ ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಕ್ರಿಯಾಶೀಲ ವ್ಯಕ್ತಿತ್ವದ ಅರುಣಾ ಕುಲಾಲ್ ಅವರು ಮುಂಡ್ಕೂರು ಉಳೆಪಾಡಿ ಗ್ರಾಮದ ಪುರಿಂಜೆಯವರಾಗಿದ್ದು, ಸ್ಥಳೀಯ ಕುಲಾಲ ಸಂಘದ ಸಕ್ರಿಯ ಸದಸ್ಯೆಯಾಗಿದ್ದಾರೆ. ಅವರು ಜೇಸಿಐ ವಲಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಭಾರ್ಗವ ಘಟಕಕ್ಕೆ ಸಾಂಸ್ಥಿಕ ರೂಪ ಕೊಟ್ಟು, ಪೂರ್ವ ಸಿದ್ಧತೆಯೊಂದಿಗೆ ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರು ಜೇಸಿಐ ಮುಂಡ್ಕೂರು ಭಾರ್ಗವದ 20ನೇ ಅಧ್ಯಕ್ಷರಾಗಿದ್ದಾರೆ.

ವೃತ್ತಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಅರುಣಾ ಅವರು ಬಾಲ್ಯದ ದಿನಗಳಲ್ಲೇ ತಮ್ಮ ಬಹುಮುಖ ಪ್ರತಿಭೆಯಿಂದ ಅರುಣಾ ಕುಲಾಲ್, `ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಜೇಸಿಐ ಮುಂಡ್ಕೂರು ಭಾರ್ಗವ ಘಟಕದ ಸೇವೆಯನ್ನು ರಾಷ್ಟ್ರೀಯವಾಗಿ ಗುರುತಿಸಿದ್ದಾರೆ ಎನ್ನುವುದೇ ದೊಡ್ಡ ಗೌರವ. ಅದರೊಂದಿಗೆ ಸೇವಾ ಕಾರ್ಯ ಮೆಚ್ಚಿ ಪ್ರಶಸ್ತಿಯನ್ನು ನೀಡಿರುವುದು ಬಹಳ ಸಂತೋಷ ತಂದಿದೆ. ಇದು ಇನ್ನೂ ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಲು ಪ್ರೇರಣೆಯಾಗಿದೆ. ಈ ಸಂದರ್ಭ ನಮ್ಮೊಂದಿಗೆ ಸಹಕರಿಸಿದ ಪದಾಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆಗಳನ್ನು ಸಮರ್ಪಿಸುತ್ತಿದ್ದೇನೆ’ ಎಂದರು.


