ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಅತ್ತಾವರ ಆಯ್ಕೆಯಾಗಿದ್ದಾರೆ. ಮಾತೃ ಸಂಘವು ದ.ಕ ಜಿಲ್ಲೆಯ ಅತ್ಯಂತ ಹಿರಿಯ ಸಂಘಟನೆಯಾಗಿದ್ದು, ನೂತನ ಅಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆದಿದೆ. ನೂತನ ಅಧ್ಯಕ್ಷರ ಅವಧಿ ಎರಡು ವರ್ಷದ್ದಾಗಿದೆ.

ಅತ್ತಾವರ ನಿವಾಸಿ ಕೃಷ್ಣ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಮಾತೃ ಸಂಘದ ಹಿರಿಯ ಸದಸ್ಯರಾಗಿದ್ದಾರೆ. ಸೇವಾದಳದ ದಳಪತಿಯಾಗಿ, ಸಂಘದ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ , ಕುಲಾಲ ಭವನದ ಮೇಲ್ವಿಚಾರಕ ಹೀಗೆ ವಿವಿಧ ಹುದ್ದೆಗಳಲ್ಲಿ ಈ ಹಿಂದೆ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ಸರಸ್ವತಿ ಅವರೂ ಕುಲಾಲ ಸಂಘದ ಮಹಿಳಾ ಮಂಡಳಿಯ ಸಕ್ರೀಯ ಹಿರಿಯ ಸದಸ್ಯರು. ತುಳು-ಕನ್ನಡ ಚಿತ್ರ ನಟ ಕಾರ್ತಿಕ್ ಅತ್ತಾವರ ಇವರ ಪುತ್ರರಾಗಿದ್ದು, ಪುತ್ರಿ ಕೃತಿಕಾ ಅವರು ಬೆಹರೈನ್ ನಲ್ಲಿ ನೆಲೆಸಿದ್ದಾರೆ.

——————————————————————————————————————————————–
ಇತರ ಪದಾಧಿಕಾರಿಗಳ ವಿವರ :
ಪ್ರಧಾನ ಕಾರ್ಯದರ್ಶಿ – ಪ್ರಸಾದ್ ಕುಲಾಲ್ ಸಿದ್ದಕಟ್ಟೆ
ಕೋಶಾಧಿಕಾರಿ -ಕಾರ್ತಿಕ್ ಡಿ
ಉಪಾಧ್ಯಕ್ಷರು- ಮಮತಾ ಎ ಕುಲಾಲ್ ಮತ್ತು ರಮೇಶ್ ಕೆ.ಎನ್
ಜೊತೆ ಕಾರ್ಯದರ್ಶಿ- ಪ್ರಕಾಶ್ ಕುಲಾಲ್ ಎಸ್
ಕ್ರೀಡಾ ಕಾರ್ಯದರ್ಶಿ- ರಾಧಕೃಷ್ಣ ಯು.ಎನ್
ಸಾಂಸ್ಕೃತಿಕ ಕಾರ್ಯದರ್ಶಿ- ಉಮೇಶ್ ಕುಲಾಲ್ ಸಿದ್ಧಕಟ್ಟೆ
ಸಂಘಟನಾ ಕಾರ್ಯದರ್ಶಿ- ಸದಾಶಿವ ಎ
ಸದಸ್ಯರು : ಜಯಾನಂದ ಎ, ವಿಶ್ವನಾಥ ಕೆ ಬಿ, ಜಯರಾಮ್ ಕೆ ವಿ, ಪಾಂಡುರಂಗ ಶಕ್ತಿನಗರ, ಭಾಸ್ಕರ್ ಕುಲಾಲ್ ಬರ್ಕೆ, ಮಮತಾ ದೇವದಾಸ್, ಗಂಗಾಧರ್ ಬರ್ಕೆ, ಪದ್ಮನಾಭ



