ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಡುಪಿಯ ದೊಡ್ಡಣ್ಣ ಗುಡ್ಡೆಯಲ್ಲಿ ಕುಮುಡ್ಡೋ ಬುಡಾಕನ್ ಕರಾಟೆ-ಡು- ಕರ್ನಾಟಕ ಇವರ ವತಿಯಿಂದ ಜರಗಿದ 12ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಜೀತನ್ ಬಂಗೇರ ಕುಳಾಯಿ ಅವರು 8ರಿಂದ 10 ನೇ ವಯೋಮಾನದ ಕಮಿಟೆ ಮತ್ತು ಕಟಾ ವಿಭಾಗದದಲ್ಲಿ ಚಿನ್ನದ ಪದಕ ಹಾಗೂ ಗೋಸಿನ್ ರೀಯೋ ಕರಾಟೆ -ಡು- ಅಸೋಸಿಯೇಷನ್ ಆಫ್ ಕರ್ನಾಟಕ (ರಿ) ಇವರ ವತಿಯಿಂದ ಮೂಲ್ಕಿ ಯಲ್ಲಿ ಜರಗಿದ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಚಾಂಪಿಯನ್ ಶಿಪ್ 2018 ರ 9 ರ ವಯೋಮಾನದ ಕಮಿಟೆ ಮತ್ತು ಕಟಾ ವಿಭಾಗದದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸುರತ್ಕಲ್ ನ ಎನ್ ಐ ಟಿ ಕೆ ಆಂಗ್ಲ ಮಾಧ್ಯಮ ಶಾಲೆಯ 4 ನೆ ತರಗತಿ ವಿದ್ಯಾರ್ಥಿಯಾಗಿರುವ ಜೀತನ್, ಸುರತ್ಕಲ್ ನ ಕರಾಟೆ ಶಿಕ್ಷಕ ರೆನ್ಸಿ ನಾಗರಾಜ್ ಕುಲಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ರಾಜ್ಯಮಟ್ಟದ ಕರಾಟೆ ಸ್ಪರ್ಧೆ : ಜೀತನ್ ಬಂಗೇರಗೆ ಚಿನ್ನದ ಪದಕ
Students corner
1 Min Read


