ಪೈವಳಿಕೆ ಕುಲಾಲ ಸಮಾಜ ಮಂದಿರ ಮತ್ತು ಗುಡಿಕೈಗಾರಿಕಾ ಕೇಂದ್ರ ಉದ್ಘಾಟನೆ
ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): “ನಾಗಾರಾಧನೆ ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇಂತಹ ಆಚರಣೆಯಲ್ಲಿ ಕುಂಬಾರಿಕೆಯನ್ನು ಕುಲಕಸುಬನ್ನಾಗಿ ಮಾಡಿಕೊಂಡು ಬಂದಿರುವ ಮೂಲ್ಯ ಸಮುದಾಯಕ್ಕೆ ವಿಶೇಷವಾದ ಸ್ಥಾನವಿದೆ ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ. ಆದ್ದರಿಂದ ಮೂಲ್ಯರು ನಾಗಪೂಜೆ ಮಾಡಲೂ ಅರ್ಹರು ” ಎಂದು ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಹಾಗೂ ಜಿ.ಕೆ. ಚಾರಿಟೆಬಲ್ ಟ್ರಸ್ಟ್ನ ನಿರ್ದೇಶಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಹೇಳಿದರು.
ಕಾಸರಗೋಡು ಕುಲಾಲ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಪೈವಳಿಕೆ ಕುಲಾಲ ಸಮಾಜ ಮಂದಿರ ಮತ್ತು ಗುಡಿಕೈಗಾರಿಕಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು“ ತುಳುನಾಡಿನ ನಾಗಾರಾಧನೆಗೆ ಸಂಬಂಧಪಟ್ಟ ಮೂಲ ತಂತ್ರಿಯಾದ ನೀಲೇಶ್ವರ ಪದ್ಮನಾಭ ತಂತ್ರಿ ಕುಟುಂಬ ಎಲ್ಲಿಯಾದರೂ ನಾಗಪ್ರತಿಷ್ಠೆ ಮಾಡುವುದಿದ್ದರೆ ಅಲ್ಲಿ ಕುಲಾಲ ಸಮುದಾಯದ ಮಗುವಿನಿಂದ ಮೊದಲು ಪಿಕ್ಕಾಸು ಹಾಕಿಸಿ ಮುಂದಿನ ಕೆಲಸ ಆರಂಭಿಸುತ್ತಾರೆ. ಯಾಕೆಂದರೆ ನಾಗಾರಾಧನೆಗೆ ಸಂಬಂಧಿಸಿದ ಆಚರಣೆಯಲ್ಲಿ ಮಣ್ಣಿನ ಅಧಿಕಾರ ಇರುವುದು ಕುಲಾಲ ಸಮುದಾಯಕ್ಕೆ. ಅದೇ ರೀತಿ ಉಪನಯನ ಆದ ವೃಕ್ಷರಾಜ ಅಶ್ವತ್ಥ ಮರದ ಒಂದು ಎಲೆ ಕೊಯ್ಯಬೇಕಾದರೂ ಅಲ್ಲಿ ಕುಲಾಲ ಸಮುದಾಯದವರು ಉಪಸ್ಥಿತರಿರಬೇಕೆಂಬ ನಿಯಮವನ್ನು ನೀಲೇಶ್ವರ ತಂತ್ರಿಯವರು ಪಾಲಿಸುತ್ತಿದ್ದಾರೆ” ಎಂದು ಅವರು ಹೇಳಿದರು.
ಸಮಾರಂಭದ ವೀಡಿಯೋ ವೀಕ್ಷಿಸಿ : (ಕೃಪೆ ಅಬ್ಬಕ್ಕ ಟೀವಿ)
https://www.youtube.com/watch?v=I_BIwjogyFE&feature=youtu.be&fbclid=IwAR23y1vIdrfq7rs5ZJbK0cJm7oJTtZ0TNd2hgjMr4kcvlzX0ZkcLDxgJfTA