ಬೆಳ್ಮಣ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರಂಗ ಕಲಾವಿದರೂ ಕೃಷಿಕರೂ ಆಗಿರುವ ಸಂಕಲಕರಿಯದ ಸುಧಾಕರ್ ಸಾಲ್ಯಾನ್ ರಿಗೆ Jc HGF ಅರುಣಾ ಕುಲಾಲ್ ಅವರ ನೇತೃತ್ವದ ಮುಂಡ್ಕೂರು ಜೇಸಿಐ ವತಿಯಿಂದ ಕಲಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮುಂಡ್ಕೂರು ಜೇಸಿಐ ಭಾರ್ಗವ ವತಿಯಿಂದ ನಡೆದ ಇತ್ತೀಚೆಗೆ ನಡೆದ ಸಪ್ತ ಲಹರಿ ಜೇಸೀ ಸಪ್ತಾಹ 2018 ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಸುಧಾಕರ್ ಅವರಿಗೆ ಈ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಸಿದ್ಧ ರಂಗ ಕಲಾವಿದರಾಗಿರುವ ಸುಧಾಕರ್ ಸುಮಾರು 30 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ಅಭಿನಯಿಸುತ್ತಿದ್ದಾರೆ. ಬಲೇ ತೆಲಿಪಾಲೆ ಖ್ಯಾತಿಯ ಹಾಸ್ಯ ಕಲಾವಿದರಾಗಿರುವ ಸುಧಾಕರ್ ಹಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕಿನ್ನಿಗೋಳಿಯ ವಿಜಯಾ ಕಲಾವಿದರು ತಂಡದ ನಿರ್ವಾಹಕರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಮುಂಬಯಿ, ಬೆಂಗಳೂರು, ಮೈಸೂರು, ಸೂರತ್ ಮತ್ತಿನ್ನಿತರ ಕಡೆ ರಂಗ ನಿರ್ವಹಣೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನ ಸದಸ್ಯರಾಗಿ, ಕಿನ್ನಿಗೋಳಿ ರೋಟರ್ಯಾಕ್ಟ್ನ ಮಾಜಿ ಅಧ್ಯಕ್ಷರಾಗಿ, ಮಾಜಿ ವಲಯ ಪ್ರತಿನಿಧಿಯಾಗಿ, ಸಂಕಲಕರಿಯದ ವಿಜಯ ಯುವಕ ಸಂಘದ ಮಾಜಿ ಅಧ್ಯಕ್ಷರಾಗಿ, ಏಳಿಂಜೆ ಪೆರ್ಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಸಾಮಾಜಿಕ ಹಾಗೂ ಧಾರ್ಮಿಕ ರಂಗಗಳಲ್ಲಿ ಜನಪ್ರಿಯರಾಗಿದ್ದಾರೆ.