ಬ್ರಹ್ಮಾವರ(ಅ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜ ಸೇವಾ ಸಂಘ ಬ್ರಹ್ಮಾವರ ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಸುಧಾಕರ ಕುಲಾಲ್ ಕನ್ನಾರು ಇವರ ಅಧ್ಯಕ್ಷತೆಯಲ್ಲಿ ಚೇರ್ಕಾಡಿ ಶಾರದ ಹೈಸ್ಕೂಲಿನಲ್ಲಿ ಅ.೨೧ರಂದು ಜರುಗಿತು.
ಕಾರ್ಯಕ್ರಮವನ್ನು ಬೆಂಗಳೂರಿನ ವಿಜಯ ವಿಠಲ ಕೆಮಿಕಲ್ಸ್ ಪ್ರೈ.ಲಿ. ಇಲ್ಲಿನ ಮ್ಯಾನೆಂಜಿಗ್ ಡೈರೆಕ್ಟರ್ ಲಕ್ಷ್ಮಣ್ ಕುಲಾಲ್ ಇವರು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಚಂದ್ರಶೇಖರ ಕುಲಾಲ್, ಕತಾರ್ ನ `ದೋಹಾ ಕುಲಾಲ್ಸ್’ ಪ್ರಮುಖರಾದ ಆನಂದ ಕುಂಬಾರ್ ಬಿ. ಇ, ಹೊಟೇಲ್ ಉದ್ಯಮಿಗಳಾದ ಗಣೇಶ್ ಕುಲಾಲ್ ಮಾರಾಳಿ, ಆಕಾಶ್ ನಂದಿ ಪವರ್ ಜನರೇಟರ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ಕುಲಾಲ್, ಆರೂರು ಗ್ರಾ. ಪಂ ಅಧ್ಯಕ್ಷರಾದ ರಾಜೀವ ಕುಲಾಲ್ ಆರೂರು, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೆಳಂಜೆ, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು, ಶಾರದ ಹೈಸ್ಕೂಲ್ ಮುಖ್ಯೋಪದ್ಯಾಯರಾದ ಸಿ ಮಂಜುನಾಥ್ ನಾಯಕ್, ಸಂಘದ ಗೌರವಾಧ್ಯಕ್ಷರಾದ ಮಂಜುನಾಥ್ ಕುಲಾಲ್ ಕೀರ್ತಿನಗರ, ನರಸಿಂಹ ಕುಲಾಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಶಂಕರ್ ಕುಲಾಲ್ ಐರೋಡಿ, ಭಾರತ್ ಸ್ಕೌಟ್ಸ್ ಮತ್ತ ಗೈಡ್ಸ್ ಇದರ ರಾಜ್ಯಮಟ್ಟದ ಪ್ರತಿಭೆ ಮನೀಶ್ ಕುಲಾಲ್ ಶಿರೂರು ಇವರನ್ನು ಸನ್ಮಾನಿಸಿ ಗೌರವಿಸಲಾಯ್ತು. ನಂತರ ಆಯ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯ್ತು. ನೂತನ ಪಧಾಧಿಕಾರಿಗಳ ಆಯ್ಕೆಯೂ ಜರುಗಿತು.
ಸಂಘದ ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ಬಸವರಾಜ್ ಕುಲಾಲ್ ಬ್ರಹ್ಮಾವರ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಸಂಜೀವ ಕುಲಾಲ್ ವರದಿ ಮಂಡಿಸಿದರು. ಕೋಶಾಧಿಕಾರಿ ವಿಶ್ವನಾಥ್ ಕುಲಾಲ್ ವಾರ್ಷಿಕ ಲೆಕ್ಕಚಾರ ಮಂಡಿಸಿದರು. ಗಣೇಶ್ ಕುಲಾಲ್ ಆರೂರು ಕಾರ್ಯಕ್ರಮ ನಿರೂಪಿಸಿ ವಿಶ್ವನಾಥ್ ಕುಲಾಲ್ ಧನ್ಯವಾದ ಸಮರ್ಪಿಸಿದರು.
ವರದಿ : ಮಂಜುನಾಥ್ ಹಿಲಿಯಾಣ