ಮಂಗಳೂರು(ಅ.೧೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಅ .೧೪ರಂದು ಪೊಲೀಸ್ ಲೇನ್ ನ ನಾಸಿಕ್ ಬಿ ಎಚ್ ಬಂಗೇರ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಜೀರ್ ಶ್ರೀಧರ್ ಕುಡುಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಲಾಲ ಸಮುದಾಯದ ನಾಯಕರುಗಳಾದ ಕಸ್ತೂರಿ ಪಂಜ, ಪ್ರಥ್ವಿರಾಜ್ ಎಡಪದವು, ಡಾ. ಅಣ್ಣಯ್ಯ ಕುಲಾಲ್ ಉಳ್ತೂರ,. ನ್ಯಾಯವಾದಿಗಳಾದ ರಾಮ್ ಪ್ರಸಾದ್, ರವೀಂದ್ರ ಮುನ್ನಿಪ್ಪಾಡಿ, ಉದಯಾನಂದ, ಉಪನ್ಯಾಸಕ ಡಾ. ಮಹಾಂತೇಶ್, ಪ್ರಶಾಂತ್ ಶಕ್ತಿ ನಗರ ಮುಂತಾದವರು ಭಾಗವಹಿಸಿ, ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸು ಸಾಧಿಸಲು ಕರೆ ನೀಡಿದರು.
ಸಮಾರಂಭದಲ್ಲಿ ರಾಜಕೀಯವಾಗಿ ಸಮುದಾಯದವರಿಗೆ ಸ್ಥಾನಮಾನ ಕೇಳಿ ಸಂಘ ಒತ್ತಡ ತರಬೇಕು ಮತ್ತು ಜಿಲ್ಲಾ ಸಂಘದ ಉಸ್ತುವಾರಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನ ಹುಟ್ಟು ಹಾಕ ಬೇಕಾದ ಅನಿವಾರ್ಯತೆಯ ಬಗ್ಗೆ ಅತಿಥಿ ಗಳು ಸಂಘದ ಗಮನಕ್ಕೆ ತಂದು ಸಭೆಯ ಮುಂದಿಟ್ಟರು. ಈ ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿ ಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.