ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಕುಲಾಲ ಸಮಾಜ ಸೇವಾ ಸಂಘ (ರಿ) ಬೆಳಪು ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆಯು ಒಂದನೇ ಗುರಿಕಾರರಾದ ಸಂದೀಪ್ ಮೂಲ್ಯ ಪೆಜತ್ತಕಟ್ಟೆ ಇವರ ಮನೆಯ ವಠಾರದಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷರಾದ ಕುಟ್ಟಿಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಪು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಡಾ ದೇವಿ ಪ್ರಸಾದ್ ಶೆಟ್ಟಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಜ್ಯೋತಿ ಸಂಗೀತಾ ಗೀತಾ ಇವರು ಪ್ರಾರ್ಥನೆಯನ್ನು ಮಾಡಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಜನಾರ್ಧನ ಕುಲಾಲ್ ಅತ್ಮೀಯವಾಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷರಾದ ಸುಧಾಕರ ಕುಲಾಲ್ ಪ್ರಕಾಶ್, ಕುಲಾಲ್ ವಕೀಲರಾದ ಸುನೀಲ್ ಎಸ್ ಮೂಲ್ಯ, ಒಂದನೆ ಗುರಿಕಾರರಾದ ಸಂದೀಪ್ ಮೂಲ್ಯ ವಿಠೋಬಾ ಭಜನಾ ಮಂಡಳಿಯ ಅಧ್ಯಕ್ಷರಾದ ನಿತೇಶ್ ಕುಲಾಲ್ ಅರ್ಚಕರಾದ ಸತೀಶ್ ಕುಲಾಲ್ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಕುಲಾಲ್ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಂಘದ ವಾರ್ಷಿಕ ವರದಿಯನ್ನು ಸಂಘದ ಜೊತೆ ಕೋಶಾಧಿಕಾರಿ ಸತೀಶ್ ಕುಲಾಲ್ ಕುಂಜೂರು ಪ್ರಾಸ್ತಾವಿಕ ನುಡಿಯೊಂದಿಗೆ ಮಂಡಿಸಿ ದಾಖಲಿಸಿದರು
ವಿಠೋಬಾ ಭಜನಾ ಮಂಡಳಿಯ ವರದಿಯನ್ನು ಸಂಘದ ಕೋಶಾಧಿಕಾರಿ ಹರೀಷ್ ಕುಲಾಲ್ ಒದಿ ದಾಖಲಿಸಿದರು. ಮಹಿಳಾ ಘಟಕದ ವರದಿಯನ್ನು ಮಹಿಳಾ ಘಟಕದ ಕಾರ್ಯದರ್ಶಿ ಮಲ್ಲಿಕಾ ಉಮೇಶ್ ಓದಿ ದಾಖಲಿಸಿದರು.
ಪ್ರತಿಭಾವಂತ ವಿದ್ಯಾರ್ಥಿ ಅನುಷಾ ಕುಲಾಲ್ ಇವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಕರಾಟೆ ಪಟು ಪ್ರಸನ್ನ ಪಿ ಕುಲಾಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ ದೇವಿ ಪ್ರಸಾದ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯ ಕಾರ್ಯಕ್ರಮವನ್ನು ಸಂಘದ ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್ ಇವರು ನಡೆಸಿಕೊಟ್ಟರು. ವಿಠೋಬಾ ಭಜನಾ ಮಂಡಳಿಗೆ ಶಾಶ್ವತ ಕೊಡುಗೆ ನೀಡಿದ ಲೋಕಯ್ಯ ಎಸ್ ಮೂಲ್ಯ ಮತ್ತು ಸತೀಶ್ ಕುಲಾಲ್ ಕುಂಜೂರು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸಂಘದ ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್ ದನ್ಯವಾದ ಸಮರ್ಪಿಸಿದರು. ಕುಲಾಲ ಸಮಾಜ ಸೇವಾ ಸಾಮಾಜದ ಪ್ರಧಾನ ಕಾರ್ಯದರ್ಶಿ ಶಂಕರ್ ಕುಲಾಲ್ ಕಾರ್ಯ ಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ನೃತ್ಯ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನಾರ್ದನ ಕುಲಾಲ್ ನಿರೂಪಿಸಿದರು.
ವರದಿ: ಶಂಕರ್ ಕುಲಾಲ್ ಬೆಳಪು
ಪ್ರಧಾನ ಕಾರ್ಯದರ್ಶಿ
ಕುಲಾಲ ಸಮಾಜ ಸೇವಾ ಸಂಘ(ರಿ) ಬೆಳಪು