ಬೆಂಗಳೂರು(ಜ.೧೧, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮುದಾಯದ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ, ತುಮಕೂರಿನ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಅಂಪಣ್ಣ ಅವರು ಧೀರ್ಘ ಕಾಲದ ಅನಾರೋಗ್ಯದಿಂದಾಗಿ ಇಂದು ನಿಧನರಾದರು.
ತುಮಕೂರಿನ ಕೋತಿತೋಪಿನಲ್ಲಿ ವಾಸವಾಗಿದ್ದ ಅಂಪಣ್ಣ ಅವರು ಬಡವರ ಕಣ್ಮಣಿ, ವೈದ್ಯಶ್ರೀ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವೈದ್ಯ ಸರ್ವಜ್ಞ ಪ್ರಶಸ್ತಿ, ವೈದ್ಯ ಲೋಕ ಸೇವಾ ಪ್ರಶಸ್ತಿ, ಕುಂಭ ಮಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದು, ಮಧುಗಿರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಅನೇಕ ಬಡಜನರ ಸೇವೆ ಮಾಡಿ ಹೆಸರು ಗಳಿಸಿದ್ದರು.
ಡಾ.ಅಂಪಣ್ಣ ಅವರ ಸಮಾಜಮುಖಿ ವೈದ್ಯಕೀಯ ಸೇವೆಯನ್ನ ಪರಿಗಣಿಸಿ ಅವರ ಹುಟ್ಟೂರ ಬಡಾವಣೆಗೆ ಅವರ ಹೆಸರನ್ನಿಟ್ಟು ಸರಕಾರ ಗೌರವಿಸಿತ್ತು. ಡಾ ಅಂಪಣ್ಣ ರವರು ಕರ್ನಾಟಕ ರಾಜ್ಯ ಕುಂಭ ವೈದ್ಯ ಕೂಟದ ಸ್ಥಾಪಕ ಸದಸ್ಯರು ಹಾಗು ಮಾರ್ಗದರ್ಶಕರಾಗಿದ್ದರು. ಮೃತರು ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಅಂಪನ್ನ ಅವರು ಮೂಲತಃ ಶಿರಾ ತಾಲೂಕಿನ ಮೇಲುಕೋಟೆಯವರಾಗಿದ್ದು, ಅವರ ಅಂತ್ಯಕ್ರಿಯೆ ಅ.೧೦ರಂದು ನಡೆಯಲಿದೆ.