ರೂಪೇಶ್ ಕುಲಾಲ್ ಗೋಳಿಯಂಗಡಿ ಸಾರಥ್ಯದಲ್ಲಿ ಹೀಗೊಂದು ವಿಶಿಷ್ಟ ಸ್ಪರ್ಧೆ
ಗೋಳಿಯಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಉಡುಪಿ ಜಿಲ್ಲೆ-ತಾಲೂಕಿನ ಗೋಳಿಯಂಗಡಿ ಮತ್ತು ವಂಡಾರು ಮಾವಿನಕಟ್ಟೆಯ ಪ್ರಗತಿ ಎಂಟರ್ ಪ್ರೈಸಸ್ ಮಾಲಕರಾದ ರೂಪೇಶ್ ಕುಲಾಲ್ ಅವರ ಸಾರಥ್ಯದಲ್ಲಿ ಇದೇ ಅಕ್ಟೋಬರ್ 7 ಭಾನುವಾರದಂದು ಗೋಳಿಯಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವಿಶಿಷ್ಟವಾದ ಮೊಬೈಲ್ ಎಸೆತ ಸ್ಪರ್ಧೆ’ ನಡೆಯಲಿದೆ.
ಸ್ಪರ್ಧೆ ನಿಯಮಗಳು:
ನಿಮ್ಮಲ್ಲಿರುವ ಯಾವುದೇ ಸ್ಕ್ರಾಪ್ ಹಳೇ ಪೋನನ್ನು ಎಸೆಯುವ ಸ್ಪರ್ಧೆ ಇದಾಗಿದ್ದು ಬಹುದೂರ ಎಸೆಯುವ ಸ್ಪರ್ಧಾಳುಗಳಿಗೆ ಬಹುಮಾನ ಲಭಿಸಲಿದೆ. ಷರತ್ತುಗಳು ಅನ್ವಯಿಸುತ್ತವೆ.
ಪ್ರಥಮ ಬಹುಮಾನವಾಗಿ 4ಜಿ ಸ್ಮಾರ್ಟ್ ಪೋನ್, ದ್ವೀತಿಯ ಬಹುಮಾನವಾಗಿ ಅಂಡ್ರಾಯಿಡ್ ಮೊಬೈಲ್ ಸ್ಪರ್ಧೆಯ ವಿಜೇತರಿಗೆ ಲಭಿಸಲಿದೆ.
ಏಕಾಗಿ ಈ ಸ್ಪರ್ಧೆ?
ಇಂದಿನ ಈ ಯುಗದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು ಮೊಬೈಲ್ ತ್ಯಾಜ್ಯ(ಮೊಬೈಲ್ ಇ ವೇಸ್ಟ್) ಒಂದೇ ಸಮನೆ ಹೆಚ್ಚುತ್ತಿದೆ. ಒಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಟ ಒಂದು ಮೊಬೈಲ್ ಬಳಸಿ ವೇಸ್ಟೆಂದು ಎಸೆಯುತ್ತಾರೆ. ಲಕ್ಷಾಂತರ ಜನ ಹೀಗೆ ಮಾಡಿದರೆ ಉಪಯೋಗರಹಿತವಾದ ಲಕ್ಷಾಂತರ ಮೊಬೈಲ್ ತ್ಯಾಜ್ಯವಾಗಿ ಹೊರಬರುತ್ತದೆ. ಇದರಿಂದ ಹಲವು ರೀತಿಯ ಪರಿಸರ ಮಾಲಿನ್ಯಗಳು ಆಗುತ್ತಿದ್ದು ಇದರ ಬಗ್ಗೆ ಬೃಹತ್ ಮಟ್ಟದ ಅರಿವನ್ನು ಮೂಡಿಸಿ ಹಳೇ ಮೊಬೈಲ್ ಗಳ ಬಿಡಿಭಾಗವನ್ನು ಪುನರ್ ಉಪಯೋಗಿಸುವ ಅರಿವನ್ನು ಮೂಡಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಈ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ರೂಪೇಶ್ ಅವರು ಸುದ್ದಿಯಲ್ಲಿದ್ದಾರೆ.
ಆಸಕ್ತರು ಸಂಪರ್ಕಿಸಿ: ಈ ಮೊಬೈಲ್ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಸ್ಪರ್ಧಾಳುಗಳು ಇದರ ಸಂಘಟಕರಾದ ರೂಪೇಶ್ ಕುಮಾರ್ (9242929261, 8105929261) ಇವರನ್ನು ಸಂಪರ್ಕಿಸಬಹುದು.
ವರದಿ: ಮಂಜುನಾಥ ಹಿಲಿಯಾಣ