ಮಂಗಳೂರು(ಸೆ.೩೦, ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ): ಸಮಾಜದಲ್ಲಿ ನೊಂದವರ, ಬಡ ಅಶಕ್ತ ರೋಗಿಗಳ ಪಾಲಿಗೆ ಬೆಳಕಾಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಾ ಬಂದಿರುವ `ಕುಲಾಲ್ ವರ್ಲ್ಡ್’ ಪುರುಷ ಮತ್ತು ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯರು ವಿವಿಧ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಮೂರು ಕುಟುಂಬಗಳಿಗೆ ಒಟ್ಟು 1,66,308/- ರೂ. ನೆರವು ನೀಡಿ ಮಾನವೀಯತೆ ಮೆರೆದಿದೆ.
ವಿಚಿತ್ರ ಕರುಳ ರೋಗದಿಂದ ಬಳಲುತ್ತಿರುವ ಕುಂಬಳೆ ಕುಂಟಂಗೇರಡ್ಕದ ಗಂಗಾಧರ ಕುಲಾಲ್ ಅವರ ಪುತ್ರಿ ಹರ್ಷಿತಾ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿಟ್ಲ ಕೆಳಗಿನಪೇಟೆ ನಿವಾಸಿ ನೇಮು ಮೂಲ್ಯ ಅವರ ಪುತ್ರಿ ಅಕ್ಷಯ ಮತ್ತು ಬ್ರೈನ್ ಟ್ಯೂಮರ್ ಪೀಡಿತ ಕಾರ್ಕಳ ವರಂಗ ಅಡ್ಕ ನಿವಾಸಿ ಪ್ರೇಮಾ ಮೂಲ್ಯ ಈ ಮೂವರ ಕುಟುಂಬದ ಕರುಣಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ನೆರವು ನೀಡುವಂತೆ ವಿನಂತಿಸಿತ್ತು.
ಇದಕ್ಕೆ ಸ್ಪಂದಿಸಿರುವ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರು ತಂಡದ ಸದಸ್ಯ ನಿತೇಶ್ ಕುಕ್ಯಾನ್ ಏಳಿಂಜೆ ಹಾಗೂ ಗ್ರೂಪ್ ಅಡ್ಮಿನ್ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರ ನೇತೃತ್ವದಲ್ಲಿ ಸಹೃದಯಿ ದಾನಿಗಳಿಂದ ಹಣ ಸಂಗ್ರಹ ನಡೆಸಿತ್ತು. ಅದರಂತೆ ಒಟ್ಟು 1,66,308 ರೂ. ಸಂಗ್ರಹಗೊಂಡಿದ್ದು, ಇದನ್ನು ಮೂರೂ ಕುಟುಂಬಕ್ಕೆ ಸಮಪಾಲು ಮಾಡಿ ತಲಾ 55,436 ರೂ. ವನ್ನು ಸೆ.30ರಂದು ಮಂಗಳೂರು ಪೊಲೀಸ್ ಲೇನ್ ನಲ್ಲಿರುವ ಶ್ರೀದೇವಿ ದೇವಸ್ಥಾನದಲ್ಲಿ ಸಂತೃಸ್ತ ಕುಟುಂಬಕ್ಕೆ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಸುಜೀರ್ ಕುಡುಪು ಅವರು ಹಸ್ತಾ೦ತರ ಮಾಡಿ ಶುಭ ಹಾರೈಸಿದರು. ಸಂತೃಸ್ತರಾದ ಹರ್ಷಿತಾ ಅವರ ತಂದೆ ಗಂಗಾಧರ ಕುಲಾಲ್ , ಅಕ್ಷಯ ಅವರ ಸಹೋದರಿ ಅಕ್ಷತಾ ಮೂಲ್ಯ , ಪ್ರೇಮಾ ಅವರ ಪುತ್ರಿ ಪ್ರಜ್ಞಾ ಮೂಲ್ಯ ಅವರು ನೆರವಿನ ಚೆಕ್ ಸ್ವೀಕರಿಸಿದರು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿಟ್ಲ ಕೆಳಗಿನಪೇಟೆ ನಿವಾಸಿ ಅಕ್ಷಯ ಅವರ ಸಹೋದರಿ ಅಕ್ಷತಾ ನೆರವಿನ ಚೆಕ್ ಸ್ವೀಕರಿಸುತ್ತಿರುವುದು.
ಈ ಸಂದರ್ಭ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ಸದಸ್ಯರಾದ ನಿತೇಶ್ ಕುಲಾಲ್ ಏಳಿಂಜೆ, ರಮೇಶ್ ಕುಮಾರ್ ವಗ್ಗ, ಅರುಣ್ ಕುಲಾಲ್ ಮೂಳೂರು, ಪ್ರಸಾದ್ ಕುಲಾಲ್ ಸಿದ್ಧಕಟ್ಟೆ, ಸುಧೀರ್ ಕುಲಾಲ್ ಕೆರ್ವಾಸೆ, ಸೂರಜ್ ಕುಲಾಲ್ ಮಂಗಳೂರು, ದಿನೇಶ್ ಕುಲಾಲ್ ಬೀಡು, `ಕುಲಾಲ್ ವರ್ಲ್ಡ್’ ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯೆ ವೈಶಾಲಿ ಕುಲಾಲ್ ಜೊತೆಗಿದ್ದರು.
ಕೃತಜ್ಞತೆಗಳು
ಕುಲಾಲ್ ವರ್ಲ್ಡ್ ನ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ, ಬಡ ರೋಗಿಗಳ ಕಣ್ಣೀರೊರೆಸುವ ದೃಷಿಯಿಂದ ಆರ್ಥಿಕ ನೆರವು ಒದಗಿಸಿದ ಸರ್ವ ಸಹೃದಯರಿಗೆ, ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡಿದ ದೋಹಾ ಕತಾರ್ ಮತ್ತು ಬೆಹರೈನ್ ಕುಲಾಲ ಮಿತ್ರರಿಗೆ ಹಾಗೂ ಪ್ರತಿ ಬಾರಿಯೂ ಮನವಿಗೆ ಸ್ಪಂದಿಸುತ್ತಾ ನಿರೀಕ್ಷೆಗೂ ಮೀರಿ ನೆರವಿನ ಹಸ್ತ ಚಾಚುತ್ತಿರುವ ಸರ್ವ ಸಹೃದಯಿ ಮಿತ್ರರಿಗೆ, ಹಣ ಸಂಗ್ರಹಕ್ಕೆ ಸಹಕರಿಸಿದ ನಿತೇಶ್ ಕುಲಾಲ್ ಏಳಿಂಜೆ ಅವರಿಗೆ `ಕುಲಾಲ್ ವರ್ಲ್ಡ್’ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ ಬೆಳ್ತಂಗಡಿ, ಡಿ. ಎಸ್ ಕುಲಾಲ್ ಒಮಾನ್, ಮುಕೇಶ್ ಕುಲಾಲ್ ಕೊಲ್ಯ ಹಾಗೂ ಮಹಿಳಾ ವಾಟ್ಸಪ್ ಗ್ರೂಪ್ ನಿರ್ವಾಹಕರಾದ ದಯಾಲಕ್ಷ್ಮಿ ಬಂಗೇರ ಬೆಹರೈನ್, ರೇಣುಕಾ ಸಾಲ್ಯಾನ್ ಮುಂಬಯಿ, ರಶ್ಮಿ ಮೂಲ್ಯ ಬೆಳ್ಮಣ್ ಕೃತಜ್ಞತೆ ಸಲ್ಲಿಸಿದ್ದಾರೆ.
(ಧನ ಸಹಾಯ ನೀಡಿ ಸಹಕರಿಸಿದವರ ವಿವರವನ್ನು ಸದ್ಯವೇ ಪ್ರಕಟಿಸಲಾಗುವುದು)