ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರು ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಇಪ್ಪತ್ತು ವರ್ಷಗಳ ಸಾರ್ಥಕ ಸಮಾಜಮುಖೀ ವೈದ್ಯಕೀಯ ಸೇವೆಯನ್ನು ನೀಡುವುದರ ಮೂಲಕ ಜನಪ್ರೀಯವಾಗಿರುವ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರ ನೇತೃತ್ವದ ಕುಲಾಲ್ ಹೆಲ್ತ್ ಸೆಂಟರ್ ಹಾಗು ಸರ್ವಜ್ಞ ಸೆಕೆಂಡ್ ಒಪಿನಿಯನ್ ಸೆಂಟರ್ ಅದರ ಸವಿ ನೆನಪಿಗಾಗಿ ಸೆ.13ರಂದು ಉಚಿತ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಏರ್ಪಡಿಸಿ ನೂರಾರು ಮಂದಿ ನಾಗರಿಕರಿಗೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು.
ಈ ಸಂದರ್ಭ ಹಿರಿಯ ಹೃದ್ರೋಗ ತಜ್ಞ ಡಾ. ಮುಕುಂದ್, ಮಂಗಳಾದೇವಿ ದೇವಸ್ಥಾನದ ಆಡಳಿತ ಮುಕ್ತೇಸರ ರಮಾನಾಥ್ ಹೆಗ್ಡೆ, ಸ್ಥಳೀಯ ಕಾರ್ಪೊರೇಟರ್ ಪ್ರೇಮನಾಥ್ ಶೆಟ್ಟಿ, ಉದ್ಯಮಿ ಪೂನಾ ಭಾಸ್ಕರ್ ಶೆಟ್ಟಿ , ಕಾರ್ಪೊರೇಟರ್ ಕವಿತಾ ವಾಸು. ಬಿಜೆಪಿ ಧುರೀಣ ನಿತಿನ್ ಕುಮಾರ್,ಕುಲಾಲ- ಕುಂಬಾರ ಸಮುದಾಯದ ನಾಯಕರಾದ ಸುಜೀರ್ ಕುಡುಪ, ಮಹಾಬಲ ಮಾಸ್ತರ್,. ನಾರಾಯಣ ಬಂಗೇರ, ಕೃಷ್ಣ ಅತ್ತಾವರ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ನಿರ್ದೇಶಕರುಗಳಾದ ಮಮತಾ ಅಣ್ಣಯ್ಯ ಕುಲಾಲ್ ಹಾಗು ಅನನ್ಯ ಎ ಕುಲಾಲ್ ಮತ್ತಿತರರು ಇದ್ದರು.