ಕಾರ್ಕಳ(ಆ.೩೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜ ಕೇವಲ ಒಂದು ಜಾತಿಯಲ್ಲ, ಅದು ಒಂದು ಕಲೆ, ಸಂಸ್ಕೃತಿಯ ಪ್ರತಿಬಿಂಬ. ನಾಗರಿಕ ಸಮಾಜದ ವೃದ್ಧಿಗೆ ಕುಲಾಲರೇ ಕಾರಣಕರ್ತರು ಎಂದು ಖ್ಯಾತ ನ್ಯಾಯವಾದಿ ರಾಮ್ ಪ್ರಸಾದ್ ಹೇಳಿದರು.
ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕುಲಾಲ ಸುಧಾರಕ ಸಂಘ ಕಾರ್ಕಳ ಇದರ 23 ನೇ ವಾರ್ಷಿಕ ಮಹಾಸಭೆಯ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಕುಲಾಲ ಸಮಾಜದವರು ಇಂದಿಗೂ ಶಿಕ್ಷಣ ವಂಚಿತರಾಗಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರುತ್ತಿರುವ ನಮ್ಮ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶನ ಅಗತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ಅಧಿಕಾರಿ ಜಯರಾಜ್ ಪ್ರಕಾಶ್ ರವರು ಮಾತನಾಡುತ್ತಾ ಸಾಧಕರನ್ನು ಗಮನಿಸಿದಾಗ ಪುರುಷರಿಗಿಂತ ಸ್ತ್ರೀಯರ ಸಂಖ್ಯೆ ಹೆಚ್ಚಿದ್ದುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪುರುಷರ ನಿರ್ಲಕ್ಷತನದ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೇಳಂಜೆಯವರು ಸಂಘ ನಡೆದು ಬಂದ ದಾರಿಯನ್ನು ಮೆಲುಕು ಹಾಕುತ್ತಾ ಭವಿಷ್ಯದಲ್ಲಿ ಸಂಘದ ಅಭಿವೃದ್ಧಿಯು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ರುದರಿಂದ ಸಂಘಟನೆಯಲ್ಲಿ ಸಮುದಾಯದ ಬಾಂಧವರ ಸಹಕಾರವನ್ನು ಕೋರಿದರು.
ಗೌರವಾಧ್ಯಕ್ಷರಾದ ಎಚ್ ಡಿ ಕುಲಾಲ್ ರವರು ಇಂದಿನ ಯುವ ಜನಾಂಗ ಕುಲಾಲ ಸಂಘದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಯುವ ಉದ್ಯಮಿ ಸಂತೋಷ್ ಕುಲಾಲ್ ಪಕ್ಕಾಲುರವರು ಮಾತನಾಡಿ, ಇಂದಿನ ಯುವ ಜನಾಂಗ ಕುಲಕಸುಬಿನಿಂದ ವಿಮುಖರಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಕುಂಬಾರಿಕೆಗೆ ಆಧುನಿಕ ಸ್ಪರ್ಶ ನೀಡುವಲ್ಲಿ ತನ್ನ ಚಿಂತನೆಯನ್ನು ಪ್ರಸ್ತಾಪಿಸಿದರು.
ಮತ್ತೋರ್ವ ಮುಖ್ಯ ಅತಿಥಿ ರಶ್ಮಿ ಕುಲಾಲ್ ಪದವುರವರು ಮಾತನಾಡಿ, ಯುವಕ-ಯುವತಿಯರು ಇಂದು ಸಂಘದ ಸದುಪಯೋಗ ಪಡೆದುಕೊಂಡು ಸಮಾಜಕ್ಕಾಗಿ ತಮ್ಮ ಕಿಂಚಿತ್ ಕಾಣಿಕೆಯನ್ನು ನೀಡುವ ಮನಸ್ಸು ಮಾಡಬೇಕುಮ್ ಸ್ವಸಮಾಜದ ಅಸಹಾಯಕರ ಸಹಕಾರಕ್ಕಾಗಿಯೇ ಹುಟ್ಟಿಕೊಂಡ ಕುಲಾಲ ಛಾವಡಿ, ಕುಲಾಲ ವರ್ಲ್ಡ್ ವಾಟ್ಸ್ಸಾಪ್ ಗುಂಪುಗಳ ಸಮಾಜಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವಲ್ಲಿ ಯುವ ಸಮುದಾಯ ಪಾತ್ರ ಅವಶ್ಯ ಅಂದರು.
ಇದೇ ಸಂದರ್ಭ ಕಾರ್ಕಳ ಕುಲಾಲ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಥಾಪಕಾಧ್ಯಕ್ಶ ಯು. ಸಿ ಮೂಲ್ಯ ಅವರ ಧರ್ಮಪತ್ನಿ ಕಮಲಾ ಮೂಲ್ಯ, ಸಮುದಾಯದ ಮುಖವಾಣಿ ಮಾಧ್ಯಮ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು ಹಾಗೂ ಕರಾಟೆ ಮತ್ತು ಕಬಡ್ಡಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಕವಿತಾ ಕುಲಾಲ್, ಹರ್ಷಿತಾ ಕುಲಾಲ್, ಸಾನಿಯಾ ಕುಲಾಲ್, ದೀಪ್ತಿ ಕುಲಾಲ್, ತೃಪ್ತಿ ಕುಲಾಲ್ ಮೊದಲಾದವರನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘದ ಅಧ್ಯಕ್ಷೆ ಪ್ರಮೀಳಾ ಆನಂದ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಪ್ರತಿಮಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕುಲಾಲ್ ಸ್ವಾಗತಿಸಿದರು, ಕಾರ್ಯದರ್ಶಿ ದಿವಾಕರ್ ಬಂಗೇರರವರು ವರದಿ ವಾಚಿಸಿದರು, ಸಂದೇಶ್ ಕುಲಾಲ್ ರವರು ಸಂದೇಶ ವಾಚಿಸಿದರು. ಕೋಶಾಧಿಕಾರಿ ಕೃಷ್ಣಮೂಲ್ಯ ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗು ಲೆಕ್ಕ ಪತ್ರ ಮಂಡಿಸಿದರು. ಧವಳ ಕೀರ್ತಿಯವರು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಕ್ರೀಡಾ ಕಾರ್ಯದರ್ಶಿ ಉದಯ್ ಕುಲಾಲ್ ಹೆರ್ಮುಂಡೆ ಕ್ರೀಡೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿಸಿದರು. ಸಂತೋಷ್ ಕುಲಾಲ್ ಪದವು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು,ಹೃದಯ್ ಕುಲಾಲ್ ರವರು ಹಾಲಿ ಕಾರ್ಯಕಾರಿ ಮಂಡಳಿಯ ಆಯ್ಕೆಯ ವಿವರಣೆ ನೀಡಿದರು. ಸತೀಶ್ ಕುಲಾಲ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ವಸಂತ್ ಕುಲಾಲ್ ಜಾರ್ಕಳ ಧನ್ಯವಾದ ಸಮರ್ಪಿಸಿದರು.
ಭೋಜನ ವಿರಾಮದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.ಸತೀಶ್ ಕಜ್ಜೋಡಿ ಇದನ್ನು ನಿರ್ವಹಿಸಿದರು. ಯುವ ಪ್ರತಿಭಾನ್ವಿತ ಗಾಯಕ ಗಣೇಶ್ ಕುಲಾಲ್ ಹಾಗೂ ಭಾಗವಹಿಸಿದ ಎಲ್ಲಾ ಪ್ರತಿಭೆಗಳನ್ನು ನೆನಪಿನ ಕಾಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಗಣೇಶ್ ಪೆಲತ್ತಿಜ, ದೇವಪ್ಪ ಕುಲಾಲ್, ಪ್ರಭಾಕರ್ ಕುಲಾಲ್, ವಿಜೇಶ್ ಕುಲಾಲ್, ವಿಶ್ವನಾಥ್ ಕುಲಾಲ್, ಸದಾನಂದ ಮೂಲ್ಯ, ತಿಮ್ಮಪ್ಪ ಕುಲಾಲ್, ಸುಹಾಸಿನಿ, ಸುಗಂಧಿ, ಸುಮತಿ, ರೇವತಿ ,ಉಷಾ ಮೊದಲಾದವರು ಶ್ರಮಿಸಿದರು.