ಕಾರ್ಕಳ (ಅಗಸ್ಟ್.೧೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬದುಕು ಜಟಕಾ ಬಂಡಿ- ವಿಧಿ ಅದರ ಸಾಹೇಬ! ಆ ವಿಧಿ ಬಡವರ ವಿಷಯದಲ್ಲಿ ಕೆಲವೊಂದು ಸಲಾ ತುಂಬಾ ಕ್ರೂರಿ ಆಗುತ್ತಾನೆ. ಕಷ್ಟಗಳನ್ನು ಕೊಟ್ಟವರಿಗೆ ಮತ್ತೇ ಕಷ್ಟಗಳನ್ನು ನೀಡುತ್ತಾನೆ. ಆ ವಿಧಿಯನ್ನು ಕ್ರೂರಿ ಅನ್ನಬೇಕೋ..ಅವರ ದುರ್ದೈವ ಅನ್ನಬೇಕೋ. .ಕೆಲವೊಂದು ಸಲ ನಮಗೆ ತಿಳಿಯದು!
ಕಾರ್ಕಳ ತಾಲೂಕಿನ ವರಂಗ ಅಡ್ಕ ಎಂಬಲ್ಲಿ ವಾಸ್ತವ್ಯ ಇರುವ ತಾಯಿ-ಮಗಳ ಪುಟ್ಟ ಸಂಸಾರದ ಕಣ್ಣಿರಿನ ಕಥೆ ಕೇಳಿದರೆ ಖಂಡಿತಾ ಈ ಮಾತುಗಳು ನಿಮಗೆ ಉತ್ಪ್ರೇಕ್ಷೆ ಅನಿಸಲಾರವು..
ಮೂಲತಃ ಪೆರ್ಡೂರಿನ ಕುಂಟಲ್ ಕಟ್ಟೆಯವರಾದ ಪ್ರೇಮಾ ಕುಲಾಲ್ ಅವರು ಬದುಕಿನಲ್ಲಿ ಎಂದೂ ನೆಮ್ಮದಿಯನ್ನು ಕಂಡಿರದ ಬಡಜೀವ. ಸುಮಾರು 23 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ವರಂಗ ಅಡ್ಕದ ಮುದ್ದು ಕುಲಾಲ್ ಅವರ ಪತಿಯಾಗಿ ಬಾಳ ಹೊಂಗನಸ್ಸನ್ನು ಕಾಣುತ್ತಾ ದಾಂಪತ್ಯಕ್ಕೆ ಕಾಲಿಟ್ಟವರು ಪ್ರೇಮ ಅವರು. ಮುದ್ದು ಮಗಳು ‘ಪ್ರಜ್ಞಾ’ ಅವರ ಅಗಮನದಿಂದ ಈ ಕುಟುಂಬ ಚೂರು ನೆಮ್ಮದಿಯ ಉಸಿರನ್ನು ಬಿಡುತ್ತಿರುವಾಗಲೇ ವಿಧಿ ತನ್ನ ಕ್ರೂರ ಲೀಲೆಯನ್ನು ಆರಂಭಿಸಿಯೇ ಬಿಟ್ಟ. ಕುಟುಂಬದ ಆಧಾರಸ್ಥಂಭ ಪತಿ ಮುದ್ದು ಕುಲಾಲ್ ಅವರಿಗೆ ದೇಹದಲ್ಲಿ ಅಚಾನಕ್ಕಾಗಿ ಗೆಡ್ಡೆ ಕಾಣಿಸಿಕೊಂಡಿತು. ಎಷ್ಟೇ ಚಿಕಿತ್ಸೆ ಮಾಡಿದರೂ ಪಲ ಕಾಣದ ಮುದ್ದು ಕುಲಾಲ್ ಕೆಲವೇ ತಿಂಗಳಲ್ಲಿ ಪತ್ನಿ ಪ್ರೇಮ ಮತ್ತು ಮುದ್ದು ಮಗಳನ್ನು ಅನಾಥರನ್ನಾಗಿಸಿ ಅಗಲಿಯೇ ಬಿಟ್ಟರು.
ಅನಿವಾರ್ಯವಾಗಿ ಕುಟುಂಬ ನಿರ್ವಹಣೆ ಮತ್ತು ಮಗಳ ಜವಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಪ್ರೇಮಾ ಅವರು ಎದೆಗುಂದದೆ ಸಮರ್ಥವಾಗಿ ಸಂಸಾರವನ್ನು ನಿರ್ವಹಿಸುತ್ತಿದ್ದ ಗಟ್ಟಿಗಿತ್ತಿ. ಆ ವಿಧಿಗೆ ತಾಯಿ-ಮಗಳ ಕಷ್ಟದ ಜೀವನದಲ್ಲಿ ಮತ್ತೇ ಗೋಳನ್ನು ತಂದಿಡಬೇಕೆನ್ನಿಸಿತೇನೋ.. ! ಕಳೆದ ಮೂರು ವರ್ಷಗಳ ಹಿಂದೆ ಪ್ರೇಮಾ ಅವರು ಬ್ರೈನ್ ಟ್ಯೂಮರ್ ನಂತಹ ಖಾಯಿಲೆಗೆ ತುತ್ತಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದ ದುರ್ವಿಧಿ ಬಂದೊದಗಿತು. ಆದರೂ ಎದೆಗುಂದದ ಪ್ರೇಮ ಸಂಬಂಧಿಕರು, ಆತ್ಮೀಯ ಬಳಗದವರಿಂದ ಲಕ್ಷಾಂತರ ರೂಪಾಯಿ ಸಾಲ-ಸೋಲ ಮಾಡಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರು. ಗುಣಮುಖರಾದರೂ ಕೂಡ.
ಎಲ್ಲವೂ ಮುಗಿಯಿತೂ ಇನ್ನಾದರೂ ನೆಮ್ಮದಿಯಿಂದ ಬದುಕಬಹುದು, ಕಾಲೇಜು ಶಿಕ್ಷಣ ಪಡೆಯುತ್ತಿರುವ ಪ್ರತಿಭಾನ್ವಿತ ಮಗಳು ಪ್ರಜ್ಞಾ ಅವರ ಉನ್ನತ ಶಿಕ್ಷಣದ ಕನಸ್ಸಿಗೆ ಬೆಂಗವಾಲಾಗಿ ನಿಲ್ಲಬೇಕು ಎನ್ನುವಾಗಲೇ ಆ ವಿಧಿ ಇದೀಗ ಮತ್ತೆ ತನ್ನ ಅಟ್ಟಹಾಸ ಬೀರಿದ್ದಾನೆ. ಕಳೆದ ಮೂರು ತಿಂಗಳಿಂದಿಚೆಗೆ ಪ್ರೇಮಾ ಅವರಿಗೆ ಕಣ್ಣಿನ ದೃಷ್ಟಿಮಂಜಾಗತೊಡಗಿತು. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ತೋರಿಸಿದಾಗ ತೀವ್ರ ತೆರನಾದ ನರದೌರ್ಬಲ್ಯ ಸಮಸ್ಯೆಯಿಂದ ಈ ತಾಯಿ ಬಳಲುತ್ತಿದ್ದು ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ತುರ್ತಾಗಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. 2ಲಕ್ಷಕ್ಕೂ ಮಿಕ್ಕಿ ಆಸ್ಪತ್ರೆಯ ಬಿಲ್ಲು ತಗಲಬಹುದೆಂದು ವೈದ್ಯರು ಅಂದಾಜಿಸಿದ್ದಾರೆ.
ಕಷ್ಟಗಳ ಮೇಲೆ ಕಷ್ಟವನ್ನೇ ಕಂಡಿರುವ ಪ್ರೇಮಾ ಅವರು ಒಂದೆಡೆ ಆಸ್ಪತ್ರೆಯ ಖರ್ಚು, ಓದಿನಲ್ಲಿ ತುಂಬಾ ಪ್ರತಿಭಾನ್ವಿತೆಯಾಗಿರು ಮಗಳ ಶಿಕ್ಷಣದ ಜವಬ್ದಾರಿಯನ್ನು ನಿರ್ವಹಿಸಲಾಗದೇ ಹತಾಶರಾಗಿ ಸಹೃದಯಿ ದಾನಿಗಳಾದ ತಮ್ಮ ಬಳಿ ಸೆರಗೊಡ್ಡಿ ಆರ್ಥಿಕ ಸಹಾಯವನ್ನು ಯಾಚಿಸುತ್ತಿದ್ದಾರೆ.. ಇಂತಹ ಈ ಬಡಕುಟುಂಬಕ್ಕೆ ಕೇವಲ ದೊಡ್ಡ ದೊಡ್ಡ ಉದ್ಯಮಿಗಳು ಮಾತ್ರ ಸಹಾಯ ಮಾಡಬೇಕಿಲ್ಲ..ನಾವು ಮಾಡಬಹುದು. ದಿನಗೂಲಿ ಕೆಲಸ ಮಾಡುವ ಮಂದಿಯೂ ತಮ್ಮಿಂದ ಆದಷ್ಟು ಕಿಂಚಿತ್ ಸಹಾಯ ಮಾಡಿದರೆ ಈ ಬಡಕುಟುಂಬಕ್ಕೆ ಅದೇ ದೊಡ್ಡ ಆಧಾರವಾದಿತು.. ಹನಿ ಹನಿ ಸೇರಿ ಹಳ್ಳ ಎಂಬಂತೆ ನೀವೆಲ್ಲ ನೀಡುವ ಕಿಂಚಿತ್ ಧನವೇ ಒಟ್ಟುಗೂಡಿ ದೊಡ್ಡ ಮೊತ್ತವಾದಿತು.. ಸುಮಸ್ಯೆಯ ಬೇಗುದಿಯಲ್ಲಿ ಬೇಯುತ್ತಿರುವ ಇಂತಹ ಬಡಕುಟುಂಬಕ್ಕೆ ಸಹಾಯ ಒದಗಿಸಿದ ಆತ್ಮತೃಪ್ತಿ ನಿಮ್ಮದಾಗಬಹುದು.
ಮನೆಯಲ್ಲಿ ಮಲಗಿರುವ ತಾಯಿ ಬದುಕಿನ ನೂರಾರು ಹೊಂಗನಸ್ಸುಗಳನ್ನು ಕಾಣುತ್ತಿರುವ ಮಗಳು ಪ್ರತಿಭಾನ್ವಿತೆ ಪ್ರಜ್ಞಾ ಅವರ ಕಣ್ಣೀರಿನ ಗೋಳಿಗೆ ಕಿಂಚಿಂತ್ ಸಹಾಯ ಓದಗಿಸುವಿರಾ ಪ್ಲೀಸ್.
ಪ್ರೇಮಾ ಅವರ ಸುಪುತ್ರಿ ಪ್ರಜ್ಞಾ ಅವರ ಬ್ಯಾಂಕ್ ವಿಳಾಸ ಹೀಗಿದೆ:
Name: PRAJNA
Account No- 520481030058353
BANK: Corporation Bank
BRANCH: MUDRADY, KARKALA
IFSC Code: CORP0000225
CONTACT: 9945689561
ಬರಹ: ಮಂಜುನಾಥ್ ಹಿಲಿಯಾಣ
ಚಿತ್ರ ಮಾಹಿತಿ: ಹೇಮಂತ್ ಕುಮಾರ್, ಕಿನ್ನಿಗೋಳಿ