ಸಂಘದ 7ನೇ ವಾರ್ಷಿಕ ಸಭೆ, ವಿದ್ಯಾರ್ಥಿವೇತನ, ಪುಸ್ತಕ ವಿತರಣೆ
ಕಾರ್ಕಳ (ಜೂ.೨೮, ಕುಲಾಲ್ ವರ್ಲ್ಡ್ ನ್ಯೂಸ್): ಇರ್ವತ್ತೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರ ಪಾಲಾಜೆ ಆಯ್ಕೆಯಾಗಿದ್ದಾರೆ. ಸಂಘದ 7ನೇ ವಾರ್ಷಿಕ ಸಭೆಯು ಇತ್ತೀಚೆಗೆ ಇರ್ವತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಈ ಸಂದರ್ಭ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷ ಆನಂದ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಕಳ ಕುಲಾಲ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಲಾಲ್, `ಕಾರ್ಕಳ ಕುಲಾಲ ಸಂಘದ ನೆರಳಲ್ಲಿ ರಚನೆಗೊಂಡ ಹಲವಾರು ಗ್ರಾಮ ಸಮಿತಿಗಳಲ್ಲಿ ಇಂದು ಕ್ರಿಯಾಶಿಲವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವುಗಳಲ್ಲಿ ಇರ್ವತ್ತೂರು ಸಂಘವು ಒಂದು.
ನಮ್ಮ ಸಮುದಾಯ ಇಂದು ಹಿಂದೆ ಉಳಿದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಪ್ರತಿಭೆಗಳಿಗೆ ಕೊರತೆಯಿಲ್ಲ. ಇವರನ್ನು ಪೋಷಿಸಿ, ಬೆಳೆಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಕಾರ್ಕಳದಲ್ಲಿ ಸರ್ವಜ್ಞ ವೃತ್ತ ಇಂದು ನಮ್ಮೆಲ್ಲರ ಒಗ್ಗಟ್ಟಿನ ಪ್ರತೀಕವಾಗಿ ರಚನೆಯಾಗಲಿದೆ. ಇದು ಇಡೀ ದಕ ಉಡುಪಿ ಜಿಲ್ಲೆಯಲ್ಲಿ ಒಂದು ಐತಿಹಾಸಿಕ ಕೊಡುಗೆಯಾಗಬೇಕಾದರೆ ನಮ್ಮೆಲ್ಲರ ಸಹಕಾರ ಅಗತ್ಯ’ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಕೆರ್ವಾಶೆ ಕುಲಾಲ ಸಂಘದ ಅಧ್ಯಕ್ಷ ಮಾತನಾಡಿ, ಸಮುದಾಯ ಸಮಾಜದ ಮುಖ್ಯವಾಹಿನಿಯತ್ತ ಮುಖ ಮಾಡುವಂತೆ ಸಮಾಜ ಸಂಘಟನೆಯ ಕೆಲಸವಾಗಬೇಕಾಗಿದೆ. ಸಂಘಟನೆಯ ಮೂಲಕ ಸಮಾಜದ ಅಭಿವೃದ್ಧಿ ಸಾಧಿಸಿಕೊಳ್ಳಬೇಕು. ಸಂಘಟನೆಯಿಂದಾಗಿ ಸಮುದಾಯದ ಸಾಕಷ್ಟು ಕುಟುಂಬಗಳು ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸುವಂತಾಗಬೇಕು’ ಎಂದರು.
ವೇದಿಕೆಯಲ್ಲಿ ಮಹಿಳಾ ಮಂಡಲ ಅಧ್ಯಕ್ಷೆ ರೂಪಾ ಸತೀಶ್, ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ಮೂಲ್ಯ, ಕಾರ್ಕಳ ಕುಲಾಲ ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ರೂಪಾ ಸಂತೀಶ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ್ ಕುಲಾಲ್ ವರದಿ ವಾಚಿಸಿದರು. ಶಿಲ್ಪಾ ಮೋಹನ್ ಕುಲಾಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚಂದ್ರಹಾಸ್ ಪಾಲಾಜೆ ಸ್ವಾಗತಿಸಿ, ಮೋಹನ್ ಕುಲಾಲ್ ವಂದಿಸಿದರು.
_____________________________________________________________________________________________________
ಸಂಘದ ನೂತನ ಪದಾಧಿಕಾರಿಗಳ ವಿವರ :
ಗೌರವಾಧ್ಯಕ್ಷರು : ಐತು ಮೂಲ್ಯ, ಚಂದ್ರಶೇಖರ ಪಾಲಾಜೆ
ಅಧ್ಯಕ್ಷರು : ಸುರೇಶ್ ಬಂಗೇರ ಪಾಲಾಜೆ
ಉಪಾಧ್ಯಕ್ಷರು : ನಾಗೇಶ್ ಕುಲಾಲ್
ಕಾರ್ಯದರ್ಶಿ : ಮೋಹನ್ ಕುಲಾಲ್
ಜೊತೆ ಕಾರ್ಯದರ್ಶಿ : ಸತೀಶ್ ಕುಲಾಲ್
ಕೋಶಾಧಿಕಾರಿ : ದಿನಕರ ಕುಲಾಲ್
ಕ್ರೀಡಾ ಕಾರ್ಯದರ್ಶಿ : ಸುರೇಶ ಕುಲಾಲ್
ಮಹಿಳಾ ಮಂಡಳಿ ಅಧ್ಯಕ್ಷರು : ಅನಿತಾ ಕುಲಾಲ್
ಉಪಾಧ್ಯಕ್ಷರು : ಶೈಲಜಾ
ಸಾಂಸ್ಕೃತಿಕ ಕಾರ್ಯದರ್ಶಿ : ರೇವತಿ
ಕಾರ್ಯಕಾರಿ ಮಂಡಳಿ ಸದಸ್ಯರು : ಆನಂದ ಕುಲಾಲ್, ಸುಖೇಶ್ ಕುಲಾಲ್, ಪ್ರಮೀಳಾ ಕುಲಾಲ್, ಪ್ರದೀಪ್ ಕುಲಾಲ್, ಅರುಣಾ ಹಕ್ಕಾಲು, ಉದಯ ಹಕ್ಕಾಲು, ಸಂತೋಷ್ ಪೊಸಲಾಯಿ.
________________________________________________________________________________________