ಮಂಗಳೂರು(ಜೂ.೧೧, ಕುಲಾಲ್ ವರ್ಲ್ಡ್ ನ್ಯೂಸ್): “ವಿದ್ಯಾರ್ಥಿಗಳು ಕೇವಲ ಪುಸ್ತಕವನ್ನು ಓದಿ ಉತ್ತಮ ಅಂಕ ಪಡೆದರೆ ಸಾಲದು ಗ್ರಂಥ ಭಂಡಾರದ ಪುಸ್ತಕಗಳನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ರವಿಕಲ ದಿನಕರ್ ಹೇಳಿದರು.
ಕುಲಾಲ ಸಂಘ ಕುಳಾಯಿ, ಕುಲಾಲ ಮಹಿಳಾ ಮಂಡಲ, ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್, ಇವರ ಸಹಯೋಗದಲ್ಲಿ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ದತ್ತು ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೊಬ್ಬ ಅತಿಥಿ ಸಿಂಡಿಕೇಟ್ ಬ್ಯಾಂಕ್ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಶಾಖೆ ಹಿರಿಯ ಪ್ರಬಂಧಕರಾದ ಪುರಂದರ ಎ, ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರ ಇದ್ದು ಭವಿಷ್ಯದ ಬಗೆ ಗಮನ ಕೊಡುವುದು ಅವಶ್ಯ. ಹೆತ್ತವರು ಕೂಡ ಸಹಕರಿಸಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯೂ ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಜತ ಸೇವಾ ಟ್ರಸ್ಟ್ ವತಿಯಿಂದ ದತ್ತು ಪಡೆದ ಹತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳು ಹಾಗೂ ಸಮಾಜದ ವಿದ್ಯಾರ್ಥಿಗಳಿಗೆ 40 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸ್ವರ್ಣ ಕುಂಭ ಸಹಕಾರಿ ಸಂಘದ ಮಾಜಿ ನಿರ್ದೇಶಕ ದಯಾನಂದ ಪಡ್ರೆ, ಅಧ್ಯಕ್ಷ ಗಂಗಾಧರ್ ಕೆ, ರಜತ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಐ ಮೂಲ್ಯ, ಕುಲಾಲ ಮಹಿಳಾ ಮಂಡಲ ಅಧ್ಯಕ್ಷೆ ಮೀರಾ ಮೋಹನ್, ಜಯೇಶ ಗೋವಿಂದ್, ಕುಮಾರ್ ಕುಲಾಲ್, ಜನಾರ್ಧನ್ ಸಾಲಿಯಾನ್ , ಗಣೇಶ್ , ನಿವೃತ್ತ ಎನ್ ಎಂ ಪಿ ಟಿ ಉದ್ಯೋಗಿ ದೇವದಾಸ್, ಹರೀಶ್ ಕುಲಾಲ್, ಯೋಗೀಶ್ ಡಿ ಕುಲಾಲ್ ,ಗಣೇಶ್ ಎಸ್ ಕುಲಾಲ್, ಶ್ವೇತಾ ಪುರುಷೋತ್ತಮ, ಜಯಂತಿ ಕೆ , ಬೇಬಿ ಟೀಚರ್, ರಾಜೀವಿ ಹರೀಶ್, ತಾರಾ ಚಂದ್ರಹಾಸ್, ಭಾರತಿ ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಂಗಾಧರ್ ಬಂಜನ್ ಸ್ವಾಗತಿಸಿದರು. ಕುಮಾರಿ ರಕ್ಷಾ ಪ್ರಾರ್ಥಿಸಿದರು. ಶ್ರೀನಾಥ್ ವಂಶಿ ಕಾರ್ಯಕ್ರಮ ನಿರೂಪಿಸಿದರು.