ಮಂಗಳೂರು(ಜೂ.೦೬, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಂಘ (ರಿ) ಕೃಷ್ಣಾಪುರ ಇದರ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.70 ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ಶೇ .85 ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಯುವಕ ಮಂಡಲ ಕೃಷ್ಣಾಪುರ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷರಾದ ಬಾಬು.ಕೆ ವಹಿಸಿದ್ದರು. ಅಥಿತಿಗಳಾಗಿ ಎಂ.ಆರ್.ಪಿ.ಎಲ್.ಕ್ವಾಲಿಟಿ ಕಂಟ್ರೋಲ್ ವಿಭಾಗ ಅಧಿಕಾರಿ ಯೋಗೀಶ್,
ಎಂ.ಆರ್.ಪಿ.ಎಲ್. ಕರ್ಮಚಾರಿ ಸಂಘದ ಅಧ್ಯಕ್ಷ ಪ್ರವೀಣ್ ಸಾಲಿಯಾನ್ ಹಾಗೂ ಸಂಘದ ನಿಕಟಪೂರ್ವ ಅದ್ಯಕ್ಷರಾದ ರಾಮಚಂದ್ರ.ಕೆ. ಉಪಾದ್ಯಕ್ಷರುಗಳಾದ ತಾರನಾಥ ಕುಲಾಲ್ ಯಾದವ ಕುಲಾಲ್ ಇವರ ಉಪಸ್ಥಿತಿಯಲ್ಲಿ ನಡೆಯಿತು. ಸುಮಾರು 100 ಮಂದಿ ವಿದ್ಯಾರ್ಥಿಗಳಿಗೆ 40 ಸಾವಿರ ಮೌಲ್ಯದ ಪುಸ್ತಕವನ್ನು ವಿತರಿಸಲಾಯಿತು.
ವಿಶ್ವನಾಥ.ಬಿ.ಮೂಲ್ಯ , ಪ್ರವೀಣ್ ಬಾಳ, ಪ್ರವೀಣ್ ಕುಮಾರ್, ಪುಷ್ಪರಾಜ್.ಬಿ.ಮೂಲ್ಯ, ವೀರೇಶ್, ವಿಠಲ ಬಂಗೇರ, ಬಾಲಕೃಷ್ಣ ಕುಲಾಲ್, ಲತೇಶ್ ಕುಲಾಲ್, ರತ್ನಾಕರ್, ಸುನಿಲ್ ಬೋಳ್ಳಾಜೆ, ನೋನಿತ್, ಚಂದ್ರಹಾಸ್, ರಾಮಯ್ಯ.ಪಿ., ಲಿಖಿತ್ ರಾಜ್, ಮಾಧವ ಬಂಗೇರ ,ಶಂಕರ ಮೂಲ್ಯ,ಪದ್ಮನಾಭ ಸುಜೀರ್ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂಜಾ ಅಥಿತಿಗಳನ್ನು ಸ್ವಾಗತಿಸಿದರು. ನಿಶಾಂತ್ ಸಾಲಿಯಾನ್ ದನ್ಯವಾದಗೈದರು . ಕುಮಾರಿ ಲಾವಣ್ಯ ಪ್ರಾರ್ಥನೆ ನೇರವೇರಿಸಿದರು. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.