ಮಂಗಳೂರು(ಜೂ.೦೪, ಕುಲಾಲ್ ವರ್ಲ್ಡ್ ನ್ಯೂಸ್): ಸುರತ್ಕಲ್ ಕೃಷ್ಣಾಪುರದ ಏಳನೇ ಬ್ಲಾಕ್ ನಲ್ಲಿ ವಾಸವಾಗಿರುವ ಬಡಕುಟುಂಬದ ವೃದ್ಧೆ ಲಕ್ಷ್ಮೀ ಮೂಲ್ಯರ ಮುರಿದುಬೀಳುವ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗೆ ಕಾಯಕಲ್ಪ ನೀಡಲು ಸ್ಥಳೀಯ ಕರಾವಳಿ ಯುವ ವೇದಿಕೆ ಸದಸ್ಯರು ಮುಂದೆ ಬಂದಿದ್ದು, ಸಮಾಜ ಬಾಂಧವರಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಲಕ್ಷ್ಮೀ ಅವರು ಪ್ರಸ್ತುತ ವಾಸಿಸುತ್ತಿರುವ ಹಳೆಯ ಹಂಚಿನ ಮನೆ ಶೋಚನೀಯ ಸ್ಥಿತಿಯಲ್ಲಿದ್ದು. ಈ ಮನೆಗೆ ಬಾಗಿಲುಗಳಿಲ್ಲ.. ಸ್ನಾನಕ್ಕೆ ಸ್ನಾನ ಗೃಹ ಇಲ್ಲ. ಶೌಚಕ್ಕೆ ಶೌಚಾಲಯ ಕೂಡ ಇಲ್ಲ. ಮಾನಸಿಕವಾಗಿ ಅಸ್ವಸ್ಥರಂತೆ ವರ್ತಿಸುವ ಇವರ ಪತಿ ಹೆಸರು ಕೇಶವ ಅವರು ಈಗ ಜೊತೆಗಿಲ್ಲ. ಈ ಮಹಿಳೆಗೆ ಗೋಪಾಲ ಮೂಲ್ಯ ಎಂಬ ಹಿರಿ ಸಹೋದರನಿದ್ದು, ಇವರು ಕೂಲಿ ನಾಲಿ ಮಾಡುತ್ತಾ ಯಾವಾಗಲಾದರೊಮ್ಮೆ ಮನೆಗೆ ಬಂದು ಹೋಗುತ್ತಿದ್ದು, ಇವರ ಆದಾಯದಿಂದ ಲಕ್ಷ್ಮೀ ಜೀವನ ಸಾಗಿಸುತ್ತಿದ್ದಾರೆ.
ಈ ಬಗ್ಗೆ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ `ಮಂಗಳೂರು ನಗರದಲ್ಲೇ ಹಿರಿಜೀವಕ್ಕಿಲ್ಲ ಆಸರೆ ; ಬದುಕು ಕತ್ತಲೆ’ ಎಂಬ ಶಿರೋನಾಮೆಯಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿರುವ ಸುರತ್ಕಲ್ ಮತ್ತು ಕೃಷ್ಣಾಪುರ ಪರಿಸರದ ಕುಲಾಲ ಯುವವೇದಿಕೆ ಹಾಗೂ ಕುಲಾಲ ಸಂಘದ ನಾಯಕರ ನೇತೃತ್ವದಲ್ಲಿ ಲಕ್ಷ್ಮಿ ಮೂಲ್ಯರ ಮನೆಯ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ. ಮನೆ ದುರಸ್ತಿಯ ಅಂದಾಜು ವೆಚ್ಚ 1,25,000 ಆಗಬಹುದಾಗಿದ್ದು, ಸಹೃದಯಿ ದಾನಿಗಳಿಂದ ನೆರವನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಸಹಾಯ ಮಾಡ ಬಯಸುವವರು ದಯವಿಟ್ಟು ಈ ಕೆಳಕಂಡ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಬೇಕಾಗಿ ವಿನಂತಿ.
ಕುಲಾಲ/ಕುಂಬಾರರ ಯುವ ವೇದಿಕೆ
A/c No. : 356
ಸ್ವರ್ಣ ಕುಂಭ ವಿವಿದ್ದೋದ್ದೇಶ ಸಹಕಾರಿ ಬ್ಯಾಂಕ್,
ತಡoಬೈಲ್ ಶಾಖೆ,
ಸುರತ್ಕಲ್
ಅಥವಾ
ದೀಕ್ಷಿತ್
ಕಾರ್ಯದರ್ಶಿ
ಕುಲಾಲ ಯುವ ವೇದಿಕೆ- ಮಂಗಳೂರು ಉತ್ತರ,
SB A/c : 01422210004963
SYNDICATE BANK
IFSC Code : SYNB0000142
Surathkal Branch
Tez A/c – 9611762203
PhonePe A/c – 9611762203
(ಹಣ ವರ್ಗಾವಣೆ ಮಾಡಿ 9611762203 ನಂಬರಿಗೆ WhatsApp/SMS ಮೂಲಕ ತಿಳಿಸಬೆಕಾಗಿ ವಿನಂತಿ)