ಮಂಗಳೂರು(ಜೂ.೦೪, ಕುಲಾಲ್ ವರ್ಲ್ಡ್ ನ್ಯೂಸ್): ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸಿದಾಗ ಅವರ ಪ್ರತಿಭೆಗೆ ಮೆರುಗು ಬರುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ಸಂಘದ ಕೆಲಸ ಶ್ಲಾಘನೀಯ ಎಂದು ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಹೇಳಿದರು.
ಮೇ. ೩ರಂದು ಎಸ್ ಕೋಡಿ ಕುಲಾಲ ಭವನದಲ್ಲಿ ನಡೆದ ತೋಕೂರು ಕುಲಾಲ ಸಂಘದ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಕಷ್ಟು ಪ್ರತಿಭೆಗಳು ನಮ್ಮ ಸಮಾಜದ ಯುವಕ ಯುವತಿಯರಲ್ಲಿ ಇರುತ್ತವೆ. ಅಂತಹ ಪ್ರತಿಭೆಗಳನ್ನು ಸಕಾಲದಲ್ಲಿ ಗುರುತಿಸಿ ಗೌರವಿಸಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು.
ಸಂಘದ ಅಧ್ಯಕ್ಷೆ ಲೀಲಾ ಬಂಜನ್ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಕುಲಾಲ ಸಂಘದ ಸುರೇಶ್ ಬಂಜನ್, ಸಂಘದ ಉಪಾಧ್ಯಕ್ಷ ಯೋಗೀಶ್ ಮೂಲ್ಯ, ಗೌರವಾಧ್ಯಕ್ಷ ಶ್ರೀಧರ ಬಂಗೇರ, ಮೆನ್ನಬೆಟ್ಟು ಗ್ರಾಪಂ ಅಧ್ಯಕ್ಷೆ ಸರೋಜಿನಿ ಗುಜರನ್, ಸುಂದರ ಸಾಲ್ಯಾನ್ ಸಂಘದ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಮಂಜಪ್ಪ ಮೂಲ್ಯ ಮತ್ತು ಸುಜಾತ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಸಂಘದ ವ್ಯಾಪ್ತಿಯ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಮಲಾಕ್ಷಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ವರದಿ ವಾಚಿಸಿದರೆ ಕೋಶಾಧಿಕಾರಿ ರೇವತಿ ಪುರುಷೋತ್ತಮ್ ವಂದಿಸಿದರು. ಲಕ್ಷ್ಮಣ ಬಿ. ಬಿ ಏಳಿಂಜೆ ಕಾರ್ಯಕ್ರಮ ನಿರೂಪಣೆ ಮಾಡಿದರು.