ಕಾರ್ಕಳ(ಮೇ. ೨೮, ಕುಲಾಲ್ ವರ್ಲ್ಡ್ ನ್ಯೂಸ್): ತಾಲೂಕಿನ ಬೋಳ ಕುಲಾಲ ಸಂಘದ ವಾರ್ಷಿಕ ಮಹಾಸಭೆ ಮತ್ತು ಶ್ರೀಸತ್ಯನಾರಾಯಣ ಪೂಜೆಯು ಬೋಳ ಗ್ರಾಮ ಪಂಚಾಯತ್ ನ ಭಗತ್ ಸಿಂಗ್ ಸಭಾಭವನದಲ್ಲಿ ಮೇ.27ರಂದು ಜರುಗಿತು.
ಕಾರ್ಕಳ ತಾಲೂಕು ಕುಲಾಲ ಸಂಘದ ಉಪಾಧ್ಯಕ್ಷ ವಸಂತ ಕುಲಾಲ್ ಎರ್ಲಪಾಡಿ ಸಭೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಪ್ರಭಾಕರ ಮೂಲ್ಯ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್.ಮೂಲ್ಯ ಪ್ರಭಾಕರ ಕುಲಾಲ್ ಇನ್ನಾ, ಕಾರ್ಕಳ ಎ.ಪಿ.ಎಂ.ಸಿ ಸದಸ್ಯೆ ವಸಂತಿ ಮಹಾಬಲ ಮೂಲ್ಯ, ಬೋಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಜಯಕರ ಮೂಲ್ಯ, ಬೋಳ ಗ್ರಾಮ ಪಂಚಾಯತ್ ನ ಸದಸ್ಯೆ ಸುಗಂಧಿ ಮೂಲ್ಯ ಹಾಗೂ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಗೀತಾ ಕುಲಾಲ್, ವಸಂತಿ ಎಂ. ಮೂಲ್ಯ,ವಿಂಧ್ಯಾ ಇವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪವನ್ ಕುಲಾಲ್ ಸರ್ವರನ್ನೂ ಸ್ವಾಗತಿಸಿದರು. ಸಂಜೀವ ಮೂಲ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂದೀಪ್ ಮೂಲ್ಯ ಲೆಕ್ಕಪತ್ರ ಮಂಡಿಸಿದರು. ವಸಂತ ಮೂಲ್ಯ ಧನ್ಯವಾದ ಸಮರ್ಪಿಸಿದರೆ ಹಾಗೂ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಬಾಲ ಪ್ರತಿಭೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.