
ಮಂಗಳೂರು:(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ ಆರ್ ಬಂಗೇರ ಅವರು ವಿಜ್ಞಾನ ವಿಭಾಗದಲ್ಲಿ 93.30% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಡುಪಣಂಬೂರಿನ ರಮೇಶ್ ಬಂಗೇರ ಹಾಗೂ ಚಿತ್ರಾ ಬಂಗೇರ ದಂಪತಿಗಳ ಸುಪುತ್ರಿ.