ಬೆಂಗಳೂರು(ಮೇ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಳೆದ ಐದು ತಿಂಗಳಿನಿಂದ ಶನಿವಾರ ಮತ್ತು ಭಾನುವಾರ ಬಂತು ಅಂದರೆ ಅದೆಷ್ಟೋ ವೀಕ್ಷಕರು ಸರಿಗಮಪ ಕಾರ್ಯಕ್ರಮವನ್ನು ನೋಡುತ್ತಿದ್ದರು. ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ಈ ಕಾರ್ಯಕ್ರಮ ಈಗ ಫೈನಲ್ ಹಂತ ತಲುಪಿದೆ. ಇದೀಗ ಐದು ಮಕ್ಕಳು ಫೈನಲ್ ಗೆ ಆಯ್ಕೆ ಆಗಿದ್ದಾರೆ.
‘ಸರಿಗಮಪ ಸೀಸನ್ 14’ ಲಿಟ್ಲ್ ಚಾಂಪ್ಸ್ ಝೀ ಕನ್ನಡ ವಾಹಿನಿಯ ಹೆಮ್ಮೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಸೆಮಿ ಫೈನಲ್ ನಿನ್ನೆ ಪ್ರಸಾರ ಆಗಿದೆ. 12 ಮಕ್ಕಳ ಪೈಕಿ ಯಾರು ಫೈನಲ್ ವೇದಿಕೆ ಮೇಲೆ ಹಾಡುತ್ತಾರೆ ಎಂಬ ನಿರೀಕ್ಷೆಗೆ ಉತ್ತರ ಸಿಕ್ಕಿದೆ. ಐದು ಮಕ್ಕಳ ಜೊತೆಗೆ ಪುಟಾಣಿ ನೇಹಾಗಳನ್ನು ಮೈಲ್ಡ್ ಎಂಟ್ರಿ ಎಂದು ಪರಿಗಣಿಸಿ ಫೈನಲ್ ಗೆ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ತನ್ನ ಮುದ್ದು ಧ್ವನಿಯ ಮೂಲಕ ಎಲ್ಲರ ಫೇವರೇಟ್ ಆಗಿದ್ದ ಬೆಂಗಳೂರಿನ ಕೀರ್ತಿನಾ ಫೈನಲ್ ಗೆ ಹಾರಿದ ಮೂರನೇ ಸ್ಪರ್ಧಿ ಆಗಿದ್ದಾರೆ. ಎಕ್ಸ್ ಪ್ರೆಶನ್ ಕ್ವೀನ್ ಎಂದು ಬಿರುದು ಪಡೆದಿರುವ ಕೀರ್ತಿನಾ ಪ್ರತಿ ಸಂಚಿಕೆಯಲ್ಲಿಯೂ ಅದ್ಬುತವಾಗಿ ಹಾಡುತ್ತಿದ್ದರು. ಕೀರ್ತಿನಾ ಹಾಡಿಗೆ ಮನಸೋತು ಹಂಸಲೇಖ ಫೈನಲ್ ಗೆ ಸೆಲೆಕ್ಟ್ ಮಾಡಿದ್ದಾರೆ. ಸೆಮಿ ಫೈನಲ್ ನಲ್ಲಿ ಕೀರ್ತಿನಾ ‘ಬಾ ಬೇಗ ಮನಮೋಹನ..’ ಹಾಡನ್ನು ಹಾಡಿದ್ದರು.
ಕೀರ್ತನಾ ಕುಂಬಾರ ಸಮುದಾಯದ ಹೆಮ್ಮೆಯ ಪ್ರತಿಭೆ. ಈಕೆಯ ತಂದೆ ಚಂದ್ರು ಅವರು ಬೆಂಗಳೂರು ನಗರ ಪೋಲಿಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕೀರ್ತನಾ ಅಜ್ಜ ರಾಮನಗರ ಜಿಲ್ಲೆಯ ಜೆ.ಡಿ.ಎಸ್. ಮುಖಂಡರಾಗಿದ್ದಾರೆ.
ಕೀರ್ತನಾ ಅವರು ಗೆಲುವು ಸಾಧಿಸಲು ಪ್ರೇಕ್ಷಕರ ಮತಗಳು ಮುಖ್ಯವಾಗಿದ್ದು, ಮೇ 26ರವರೆಗೆ Vote ಮಾಡುವ ಅವಕಾಶ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಿ ಗೆಲ್ಲಿಸಬೇಕೆಂದು ಆಕೆ ಮನವಿ ಮಾಡಿದ್ದಾಳೆ.
ಓಟ್ ಮಾಡಲು KEER ಎಂದು ಟೈಪ್ ಮಾಡಿ 57575ಗೆ SMS ಕಳುಹಿಸಬೇಕಾಗಿದೆ.