ಕಷ್ಟಗಳ ನಡುವೆ ಕಲಿಕೆಯೊಂದೇ ಗುರಿ
ಚಿಕ್ಕ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಸೃಜನ್ಗೆ ಕಲಿಕೆಯಲ್ಲಿ ಎಳವೆಯಿಂದಲೇ ಅತೀವ ಆಸಕ್ತಿ. ಮನೆಯಲ್ಲಿ ತೀರಾ ಬಡತನ. ತಾಯಿ ಸರೋಜಾ ಕುಲಾಲ್ ಕುಂದಾಪುರದಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ. ಪಂಚಾಯತ್ ಅನುದಾನದಲ್ಲಿ ಹೆಮ್ಮಾಡಿಯಲ್ಲಿ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ.
ಮನೆಯ ಕೆಲಸದ ಜತೆಗೆ ರಜೆ ಸಮಯದಲ್ಲೆಲ್ಲ ಸೃಜನ್ ವಾಹನದಲ್ಲಿ ಜ್ಯೂಸ್ ಸರಬರಾಜು ಕೆಲಸ ಮಾಡುತ್ತಿದ್ದ. ಎಸೆಸೆಲ್ಸಿ ಫಲಿತಾಂಶದ ದಿನವೂ ಕೆಲಸಕ್ಕೆ ಹೋಗಿದ್ದು, ಸ್ನೇಹಿತರ ಮೂಲಕ ಅಂಕ ತಿಳಿದುಕೊಂಡಿದ್ದ. ಓದಲು ರಜೆ ಇದ್ದಾಗಲೂ ಕೆಲಸಕ್ಕೆ ಹೋಗುತ್ತಿದ್ದ ಎಂದು ಮನೆಯವರು ಹೇಳುತ್ತಾರೆ.
ಗರಿಷ್ಠ ಅಂಕ
ಈ ವರ್ಷ ಸುವರ್ಣ ಮಹೋತ್ಸವ ಸಂಭ್ರಮ ವನ್ನಾಚರಿಸಿದ ಹೆಮ್ಮಾಡಿ ಸರಕಾರಿ ಪ್ರೌಢಶಾಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬನಿಗೆ 600 ಕ್ಕಿಂತ ಅಧಿಕ ಅಂಕ ಸಿಕ್ಕಿದೆ.
————-ವಿಜ್ಞಾನದಲ್ಲಿ ಆಸಕ್ತಿ———————-
ತಾಯಿ, ಅಣ್ಣ ಸಹಕಾರ ನೀಡಿದ್ದಾರೆ. ವಿಜ್ಞಾನ ವಿಷಯದಲ್ಲಿ ಆಸಕ್ತಿಯಿದ್ದು, ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದೇನೆ.
– ಸೃಜನ್ ಕುಲಾಲ್
____________________________________________________________________________
(ಬಡಕುಟುಂಬದ ಸೃಜನ್ ಕುಟುಂಬಕ್ಕೆ ನೆರವಾಗಬಯಸುವ ದಾನಿಗಳು ದೂರವಾಣಿ ಸಂಖ್ಯೆ : 8971466910 ಸಂಪರ್ಕಿಸಿ)