ಮಂಗಳೂರು(ಮೇ.೧೩, ಕುಲಾಲ್ ವರ್ಲ್ಡ್ ನ್ಯೂಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಂಡಾರಿಬೆಟ್ಟುವಿನ ಮತಗಟ್ಟೆಯೊಂದರಲ್ಲಿ ಶನಿವಾರ ನವವಧುವೊಬ್ಬರು ವಿವಾಹ `ತಮ್ಮನ’ ಮುಗಿಸಿ ಮತ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಭಂಡಾರಿಬೆಟ್ಟು ಜನಾರ್ದನ್ ಕುಲಾಲ್ ಮತ್ತು ನಾಗವೇಣಿ ದಂಪತಿಯ ಪುತ್ರಿ, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹರ್ಷಿತಾ ಜೆ. ಸಾಲ್ಯಾನ್ ಅವರಿಗೆ ಏಪ್ರಿಲ್ 29ರಂದು ದಿಲ್ಲಿಯಲ್ಲಿ ದೀಪಕ್ ಎಂಬವರ ಜೊತೆ ಮದುವೆ ನಡೆದಿದೆ.
ಮತದಾನದ ದಿನವಾದ ಮೇ.೧೨ರಂದು ಬಿ.ಸಿ.ರೋಡ್ ಮೊಡಂಕಾಪು ಚರ್ಚ್ ಹಾಲ್ನಲ್ಲಿ ಮದುವೆಯ `ತಮ್ಮನ’ (ಔತಣಕೂಟ) ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಮುಗಿಸಿ ಚಿನ್ನಾಭರಣದೊಂದಿಗೆ ಸಿಂಗಾರಗೊಂಡ ಹರ್ಷಿತಾ ಬೆಳಗ್ಗೆ ಕುಟುಂಬಸ್ಥರೊಂದಿಗೆ ಬಂಟ್ವಾಳ ಎಸ್ ವಿ ಎಸ್ ಪ್ರೌಢ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.