
ಮೂಲ್ಕಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಂಜಿನಡ್ಕ ಕೆಪಿಎಸ್ ಕೆ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಮೂಲ್ಯ ಅವರು 92.32% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಕವತ್ತಾರು ಪುತ್ತೂರು ಸುಧಾಕರ ಮೂಲ್ಯ ಹಾಗೂ ಸುಶೀಲಾ ಮೂಲ್ಯ ದಂಪತಿಗಳ ಸುಪುತ್ರಿ.