
ಉಡುಪಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಬ್ರಿ ಅಮೃತ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾಂಕ ಎಸ್ ಕುಲಾಲ್ ಅವರು 95.20% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಸಾಂತ್ಯಾರು ಶ್ರೀನಿವಾಸ ಮೂಲ್ಯ ಮತ್ತು ಪ್ರಫುಲ್ಲ ದಂಪತಿಗಳ ಸುಪುತ್ರಿ.