
ಉಡುಪಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಹೆಬ್ರಿ ಎಸ್ ಆರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಶಿಕಾ ಕೆ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 85% ಅಂಕ ಗಳಿಸಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಪಕ್ಕಾಲು ನಿವಾಸಿ ಕೃಷ್ಣ ಕುಲಾಲ್ ಮತ್ತು ಶ್ವೇತಾ ದಂಪತಿಗಳ ಸುಪುತ್ರಿ.