ಬಂಟ್ವಾಳ (ಕುಲಾಲ್ ವರ್ಲ್ಡ್ ನ್ಯೂಸ್): ಇಲ್ಲಿನ ತಾಲೂಕು ಕುಲಾಲ ಸುಧಾರಕ ಸಂಘದ 2018-2019ನೇ ಸಾಲಿನ ಅಧ್ಯಕ್ಷರಾಗಿ ಡಿ. ಎಂ.ಕುಲಾಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದಲ್ಲಿ ಕಳೆದ 32 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಹಲವಾರು ಹುದ್ದೆಯನ್ನು ನಿರ್ವಹಿಸಿರುವ ಡಿ.ಎಂ ಕುಲಾಲ್ ಪತ್ರಕರ್ತರಾಗಿ, ಲೇಖಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡವರು.
ದಿ.ಅಮ್ಮೆಂಬಳ ಬಾಳಪ್ಪ, ದಿ.ಹೂವಯ್ಯ ಮೂಲ್ಯರವರ ಗರಡಿಯಲ್ಲಿ ಪಳಗಿರುವ ಡಿ ಎಂ ಕುಲಾಲ್ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರಾಗಿ 1989 ರಿಂದ ನಿರಂತರ ಸೇವೆ ಸಲ್ಲಿಸುತ್ತಾ, 1990 ರಲ್ಲಿ ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಸ್ಥಾಪಕ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕರಾಗಿ ಸಂಘವನ್ನು ಕಟ್ಟಿ ಬೆಳೆಸಿದವರು. ಯಾವುದೇ ವಿಷಯ, ವಿಚಾರಧಾರೆಗಳ ಬಗ್ಗೆ ನಿಖರವಾದ ಅಂಕಿ, ಅಂಶಗಳ ಜತೆ ಸೂಕ್ತ ಮಾಹಿತಿಯನ್ನು ನೀಡಿ ನಿರರ್ಗಳವಾಗಿ ಮಾತಾಡಬಲ್ಲ ಡಿ ಎಂ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾಗಿ, ಬಂಟ್ವಾಳ ತುಳುಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದರು. ಕುಲಾಲ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರ, ರಂಗ ಕಲಾವಿದರ, ಪತ್ರಕರ್ತರ, ಯಕ್ಷಗಾನ ಕಲಾವಿದರ, ಬಗ್ಗೆ ಹಲವು ಲೇಖನವನ್ನು ಬರೆದವರು.1990ರಲ್ಲಿ ಮೀಸಲಾತಿಯ ಬಗ್ಗೆ ಪುಸ್ತಕ ವನ್ನು ಬರೆದು ಪ್ರಕಟಿಸಿದರು. ಉತ್ತಮ ಸಾಹಿತಿಯಾಗಿರುವ ಇವರು ವಿವಿಧ ವಿಷಯಗಳ ಕುರಿತು ಈವರೆಗೆ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಸಂಘದ ಭವನದಲ್ಲಿ ನಡೆದ ಸಭೆಯಲ್ಲಿ ಇವರನ್ನು 2018-2019ನೇ ಸಾಲಿನ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
——————–ಇತರ ಪದಾಧಿಕಾರಿಗಳು———————–
ಉಪಾಧ್ಯಕ್ಷ : ಕೃಷ್ಣ ಶ್ಯಾಮ್, ಬಿ.ಸಿ ರೋಡ್
ಕಾರ್ಯದರ್ಶಿ : ಮಾಧವ ಕುಲಾಲ್, ಬಿ.ಸಿ ರೋಡ್
ಕೋಶಾಧಿಕಾರಿ : ಲಿಂಗಪ್ಪ ಮಾಸ್ತರ್ ಪೊಸಳ್ಳಿ
ಜತೆ ಕಾರ್ಯದರ್ಶಿ : ಪದ್ಮನಾಭ ಅಲೆತ್ತೂರು, ರಮೇಶ್ ಸಾಲಿಯಾನ್
ಸಂಘಟನಾ ಕಾರ್ಯದರ್ಶಿ : ಯಾದವ ಕುಲಾಲ್
ಕ್ರೀಡಾ ಕಾರ್ಯದರ್ಶಿ : ಜಯರಾಜ್ ಬಂಗೇರ
ಸಾಂಸ್ಕೃತಿಕ ಕಾರ್ಯದರ್ಶಿ : ಕೇಶವ ಮಾಸ್ತರ್ ಮಾರ್ನಬೈಲು, ಜಲಜಾಕ್ಷಿ ಪಾಣೆಮಂಗಳೂರು
ಮಹಿಳಾ ಘಟಕದ ಅಧ್ಯಕ್ಷೆ : ನಮಿತಾ ಅಲೆತ್ತೂರು
—————————————————————————————————–