ಉಡುಪಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಹೆಬ್ರಿ ಎಸ್ ಆರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಕುಲಾಲ್ ಅವರು ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ 94.83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಕುಂಟಾಲಕಟ್ಟೆ ಕೃಷ್ಣ ಕುಲಾಲ್ ಮತ್ತು ರಜನಿ ಕುಲಾಲ್ ದಂಪತಿಗಳ ಸುಪುತ್ರಿ. ರಕ್ಷಿತಾ ಅವರು ನಿರೀಕ್ಷಿತ ಫಲಿತಾಂಶ ಲಭಿಸದೇ ಇರುವುದರಿಂದ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ : ರಕ್ಷಿತಾ ಕುಲಾಲ್ ಗೆ 94.83% ಅಂಕ
Students corner
1 Min Read


