ಬಂಟ್ವಾಳ(ಏ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಇಲ್ಲಿನ ಸಮಾಜ ಸೇವಾ ಸಹಕಾರಿ ಬ್ಯಾಂಕ್ 2017-18ನೇ ಸಾಲಿನಲ್ಲಿ 469.02 ಕೋಟಿ ವ್ಯವಹಾರ ನಡೆಸಿದ್ದು, ಸುಮಾರು 3.04 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿಗಿಂತ ಶೇ 15 ರಷ್ಟು ಹೆಚ್ಚಿನ ವ್ಯವಹಾರವಾಗಿದ್ದು ಉತ್ತಮ ಸಾಧನೆಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುರೇಶ ಕುಲಾಲ್ ತಿಳಿಸಿದರು.
ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕಿನಲ್ಲಿ 6220 ಸದಸ್ಯರಿದ್ದು ಪಾಲು ಬಂಡವಾಳ 6.01 ಕೋಟಿ, ಠೇವಣಾತಿಗಳು 118.94 ಕೋಟಿ, ನಿಧಿಗಳು 6.28 ಕೋಟಿ, ವಿನಿಯೋಗಗಳು 41.66 ಕೋಟಿ, ಸಾಲಗಳು 95.59 ಕೋಟಿ, ವಸೂಲಾತಿ ಶೇಕಡ 95.36 ಆಗಿರುತ್ತದೆ. 2.86 ಕೋಟಿ ರೂಪಾಯಿಗಳ ಕ್ಷೇಮನಿಧಿ ಹಾಗೂ ಬ್ಯಾಂಕ್ 4.43 ಕೋಟಿ ರೂಪಾಯಿಗಳ ಚರ ಸ್ಥಿರ ಆಸ್ತಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ 131.89 ಕೋಟಿ ರೂಪಾಯಿ ಆಗಿರುತ್ತದೆ ಎಂದರು.
ಬಂಟ್ವಾಳ ಪೇಟೆ ಶಾಖೆಯಲ್ಲಿ ಒಟ್ಟು ವ್ಯವಹಾರ 48.38 ಕೋಟಿಗಳಾಗಿದ್ದು, ಠೇವಣಾತಿಯು 20.44 ಕೋಟಿ ರೂಪಾಯಿಗಳಾಗಿರುತ್ತದೆ. 10.23 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಫರಂಗಿಪೇಟೆ ಶಾಖೆಯಲ್ಲಿ ಒಟ್ಟು ವ್ಯವಹಾರ 53.29 ಕೋಟಿ ರೂಪಾಯಿಗಳಾಗಿದ್ದು ಠೇವಣಾತಿಯು 15.10 ಕೋಟಿ ರೂಪಾಯಿಗಳಾಗಿರುತ್ತದೆ. 13.27 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ ಎಂದರು.
ವಿಟ್ಲ ಶಾಖೆಯಲ್ಲಿ ಒಟ್ಟು ವ್ಯವಹಾರ 39.08 ಕೋಟಿಗಳಾಗಿದ್ದು ಠೇವಣಾತಿಯು 9.03 ಕೋಟಿ ರೂಪಾಯಿಗಳಾಗಿರುತ್ತದೆ. 10.25 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ ಎಂದ ಅವರು ಕುಕ್ಕಾಜೆ-ಕುಡ್ತಮುಗೇರು ಶಾಖೆಯಲ್ಲಿ ಒಟ್ಟು ವ್ಯವಹಾರ 28.70 ಕೋಟಿಗಳಾಗಿದ್ದು, ಠೇವಣಾತಿಯು 7.03 ಕೋಟಿ ರೂಪಾಯಿಗಳಾಗಿರುತ್ತದೆ. 6.77 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ ಎಂದರು.
ಮುಡಿಪು ಶಾಖೆಯಲ್ಲಿ ಒಟ್ಟು ವ್ಯವಹಾರ 36.63 ಕೋಟಿಗಳಾಗಿದ್ದು, ಠೇವಣಾತಿಯು 7.63 ಕೋಟಿ ರೂಪಾಯಿಗಳಾಗಿರುತ್ತದೆ. 9.83 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ ಎಂದ ಸುರೇಶ್ ಕುಲಾಲ್ ಬೈಪಾಸ್ ಜಂಕ್ಷನ್ ಶಾಖೆಯಲ್ಲಿ ಒಟ್ಟು ವ್ಯವಹಾರ 61.44 ಕೋಟಿಗಳಾಗಿದ್ದು ಠೇವಣಾತಿಯು 23.62 ಕೋಟಿ ರೂಪಾಯಿಗಳಾಗಿರುತ್ತದೆ. 15.12 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಪಡೀಲ್ ಶಾಖೆಯಲ್ಲಿ ಒಟ್ಟು ವ್ಯವಹಾರ 49.61 ಕೋಟಿಗಳಾಗಿದ್ದು ಠೇವಣಾತಿಯು 14.64 ಕೋಟಿ ರೂಪಾಯಿಗಳಾಗಿರುತ್ತದೆ. 8.45 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಕಲ್ಲಡ್ಕ ಶಾಖೆಯಲ್ಲಿ ಒಟ್ಟು ವ್ಯವಹಾರ 28.30 ಕೋಟಿಗಳಾಗಿದ್ದು ಠೇವಣಾತಿಯು 5.52 ಕೋಟಿ ರೂಪಾಯಿಗಳಾಗಿರುತ್ತದೆ. 9.39 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಬಜಪೆ ಶಾಖೆಯಲ್ಲಿ ಒಟ್ಟು ವ್ಯವಹಾರ 18.15 ಕೋಟಿಗಳಾಗಿದ್ದು ಠೇವಣಾತಿಯು 5.56 ಕೋಟಿ ರೂಪಾಯಿಗಳಾಗಿರುತ್ತದೆ. 4.08 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಬಿ.ಸಿ.ರೋಡ್ ಶಾಖೆಯಲ್ಲಿ ಒಟ್ಟು ವ್ಯವಹಾರ 21.52 ಕೋಟಿಗಳಾಗಿದ್ದು ಠೇವಣಾತಿಯು 5.84 ಕೋಟಿ ರೂಪಾಯಿಗಳಾಗಿರುತ್ತದೆ. 4.49 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ. ಪೂಂಜಾಲಕಟ್ಟೆ ಶಾಖೆಯಲ್ಲಿ ಒಟ್ಟು ವ್ಯವಹಾರ 15.62 ಕೋಟಿಗಳಾಗಿದ್ದು ಠೇವಣಾತಿಯು 4.49 ಕೋಟಿ ರೂಪಾಯಿಗಳಾಗಿರುತ್ತದೆ. 3.61 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇರುತ್ತದೆ ಎಂದವರು ತಿಳಿಸಿದರು.