ಕುಲಾಲರಿಗೆ ಕರುಣೆ ಬೇಡ, ಅವಕಾಶ ಬೇಕು: ನಿರಂಜನ್ ಎಮ್ ಅಸೋಡು
ಕುಂದಾಪುರ(ಮಾ.೨೬, ಕುಲಾಲ್ ವರ್ಲ್ಡ್ ನ್ಯೂಸ್) : ಕುಲಾಲರು ಈ ಸಮಾಜದಲ್ಲಿ ಶೋಷಿತ ಸಮುದಾಯ. ಅವರ ಮುಗ್ಧತೆ, ಪ್ರಾಮಾಣಿಕತೆ, ಬದ್ಧತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅವರನ್ನು ತಲೆತಲಾಂತರದಿಂದ ಶೋಷಿಸಲಾಗಿದೆ. ನಾಯಕತ್ವ ಗುಣ ಕುಲಾಲರಲ್ಲೂ ಇದೆ. ಹಾಗಾಗಿ ಸರಕಾರಗಳು, ರಾಜಕೀಯ ಪಕ್ಷಗಳು ಕುಲಾಲರಿಗೆ ಅವಕಾಶವನ್ನು ನೀಡಬೇಕು ಎಂದು ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇಲ್ಲಿನ ಅಧ್ಯಕ್ಷರಾದ ನಿರಂಜನ ಎಮ್. ಅಸೋಡು ಹೇಳಿದರು.
ಹಾಲಾಡಿಯ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರುಗಿದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಲಾಡಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಅವರು ಮಾತನಾಡುತ್ತಿದ್ದರು. ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಲಾಡಿ ಘಟಕದ ಅಧ್ಯಕ್ಷರಾದ ಉದಯ್ ಕುಲಾಲ್ ಹಾಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರ್ವೋತ್ತೊಮ ಹೆಗ್ಡೆ ಮಾತನಾಡಿ, ಕುಲಾಲರು ಪ್ರಾಮಾಣಿಕತೆ, ಮುಗ್ದತೆಗೆ ಹೆಸರಾದ ಸಮುದಾಯ. ಶಿಕ್ಷಣವೊಂದೇ ಸಮುದಾಯದ ಅಭಿವೃದ್ದಿಗೆ ಭದ್ರ ತಳಪಾಯ ಹಾಕಬಲ್ಲದು. ಹಾಗಾಗಿ ಕುಲಾಲರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಕುಲಾಲ ಸಮಾಜ ಬೆಂಗಳೂರು ಇಲ್ಲಿ ಪ್ರಧಾನ ಕಾರ್ಯದರ್ಶಿ ಶಂಕರ್ ಕುಲಾಲ್ ಜನ್ನಾಡಿ, ನಿವೃತ್ತ ಬ್ಯಾಂಕ್ ಅಧಿಕಾರಿ ಮಂಜುನಾಥ್ ಕಾಮತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಬೈಂದೂರು, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕುಂದಾಪುರ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಕುಲಾಲ್ ಕೆದೂರು, ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್ ಕುಲಾಲ್ ಜನ್ಸಾಲೆ, ಹೆಂಗವಳ್ಳಿ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಗೋವಿಂದ ಕುಲಾಲ್ ಹೆಂಗವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜುನಾಥ್ ಹಿಲಿಯಾಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆನಂದ ಕುಲಾಲ್ ಧನ್ಯವಾದ ಸಮರ್ಪಿಸಿದರು.