ಉಡುಪಿ (ಮಾ.೨೪, ಕುಲಾಲ್ ವರ್ಲ್ಡ್ ನ್ಯೂಸ್) : ಕುಂಬಾರಿಕೆ ಕಲೆ ಪರಿಣಿತರಾದ ಬೊಗ್ಗು ಕುಲಾಲ್ ಇವರಿಗೆ ಕೆಮ್ಮಲಜೆ ಜಾನಪದ ಪ್ರಕಾಶನದಿಂದ ನೀಡುವ 2017ನೇ ಸಾಲಿನ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಾ. ೨೪ರಂದು ಉಡುಪಿಯ ದುರ್ಗಾ ಇಂಟರ್ನಾಷನಲ್ ಹೋಟೆಲ್ ಸಭಾಂಗಣದಲ್ಲಿ ಡಾ.ವೈ.ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೊಗ್ಗು ಕುಲಾಲ್ ಕಳೆದ 50 ವರ್ಷಗಳಿಂದ ಕುಂಬಾರಿಕೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕಲಾತ್ಮಕವಾಗಿ ಕುಂಬಾರಿಕೆ ರಚನೆಯಲ್ಲಿ ಪಳಗಿದವರು. ಇಂದಿಗೂ ಅದೇ ಕಸುಬನ್ನು ಮುಂದುವರಿಸಿ ಆ ಕಲೆಯ ಚಲನಶೀಲತೆಗೆ ಕಾರಣರಾಗಿದ್ದಾರೆ. ಅವರು ಈ ಕಲೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬನ್ನಂಜೆ ಬಾಬು ಅಮೀನ್ ಕಲಾವಿದ ಪ್ರಶಸ್ತಿಯನ್ನು ನೀಡಲಾಗಿದ್ದು ಇದೇ ಸಂದರ್ಭ ಜಾನಪದ ವಿದ್ವಾಂಸ ಹಾಗೂ ಸಂಶೋಧಕ ಮುದ್ದು ಮೂಡುಬೆಳ್ಳೆ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದ ಕೇಶವಮೂರ್ತಿ ಬೆಲ್ಪತ್ರೆ ಅವರಿಗೆ ಸನ್ಮಾನಿಸಲಾಯಿತು. ಪ್ರಶಸ್ತಿಯು 10,000ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿದೆ