ಕಾಪು(ಮಾ.೦೫, ಕುಲಾಲ್ ವರ್ಲ್ಡ್ ನ್ಯೂಸ್): ಕೈ ಮುರಿತಕ್ಕೊಳಗಾದ ಬಾಲಕಿಯ ಚಿಕಿತ್ಸೆಗೆ ಹಣದ ಅಡಚಣೆಯಲ್ಲಿದ್ದ ಬಡ ಕುಟುಂಬಕ್ಕೆ `ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸದಸ್ಯರು ನೆರವು ನೀಡಿ ಮಾನವೀಯತೆ ಮೆರೆದರು.
ಕಾಯಿಲೆಗೆ ತುತ್ತಾಗಿ ಎಡಗಾಲನ್ನೇ ಕಳೆದುಕೊಂಡಿರುವ ಹೊಂದಿರುವ ಕಾಪು ಮೂಳೂರು ನಿವಾಸಿ ದಯಾನಂದ ಮೂಲ್ಯರ ಪುತ್ರಿ ಲಾವಣ್ಯ ಆಟವಾಡುವ ವೇಳೆ ಬಿದ್ದು ಎಡಗೈ ಮುರಿತಕ್ಕೊಳಗಾಗಿದ್ದಳು. ಮೊದಲೇ ಅಂಗವೈಕಲ್ಯ, ಬಡತನದಿಂದ ಕಂಗೆಟ್ಟಿದ್ದ ಕುಟುಂಬ ಈಕೆಯ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿತ್ತು. ತನ್ನ ಸಂಕಷ್ಟವನ್ನು `ಕುಲಾಲ್ ವರ್ಲ್ಡ್’ ಸಕ್ರಿಯ ಸದಸ್ಯರಾದ ಅರುಣ್ ಕುಲಾಲ್ ಅವರಲ್ಲಿ ತೋಡಿಕೊಂಡಿದ್ದರು. ಚಿಕಿತ್ಸೆಗೆ ಸಣ್ಣ ಮೊತ್ತದ ಅವಶ್ಯಕತೆ ಇರುವುದುನ್ನು ಮನಗಂಡ ಅವರು `ಕುಲಾಲ್ ವರ್ಲ್ಡ್’ ನ ಅಡ್ಮಿನ್ ಹೇಮಂತ್ ಕುಮಾರ್ ಕಿನ್ನಿಗೋಳಿ ಮೂಲಕ ಕೆಲ ಆಪ್ತರನ್ನು ಸಂಪರ್ಕಿಸಿ ನೆರವು ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಅರೇಬಿಯಾದ ಮುಖೇಶ್ ಕುಲಾಲ್ ಹಾಗೂ ಧನುಷ್ ಅವರು ಅವರಿಗೆ ಅವಶ್ಯವಾದ 8,500/- ನೀಡಿದ್ದರು. ಈ ಹಣವನ್ನು ದಯಾನಂದ ಮೂಲ್ಯರ ಮನೆಗೆ ತೆರಳಿ ನೀಡಲಾಯಿತು. ಈ ವೇಳೆ ಕುಲಾಲ್ ವರ್ಲ್ಡ್ ನ ಹೇಮಂತ್ ಕುಮಾರ್ ಕಿನ್ನಿಗೋಳಿ, ಅರುಣ್ ಕುಲಾಲ್ ಮೂಳೂರು, ಸಂತೋಷ್ ಕುಲಾಲ್ ಪದವು, ಸಂತೋಷ್ ಕುಲಾಲ್ ಮೂಳೂರು,ರಜನಿಕಾಂತ್ ಕುಲಾಲ್ ಮೂಳೂರು, ನಿತಿನ್ ಕುಲಾಲ್ ಮೂಳೂರು ಇದ್ದರು.
ಈ ಹಿಂದೆ ದಯಾನಂದ ಮೂಲ್ಯ ಅವರು ಕುಡಿಯುವ ನೀರಿನ ಬವಣೆ ಅನುಭವಿಸುತ್ತಿದ್ದು, ಇವರ ಸಮಸ್ಯೆಯನ್ನು ಮನಗಂಡ `ಕುಲಾಲ ಚಾವಡಿ’ಯ ಸದಸ್ಯರು ಸಂತೋಷ್ ಕುಲಾಲ್ ಪದವು ನೇತೃತ್ವದಲ್ಲಿ ಬೋರ್ ವೆಲ್ ತೊಡಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.