ಮಂಗಳೂರು(ಫೆ.೨೭, ಕುಲಾಲ್ ವರ್ಲ್ಡ್ ನ್ಯೂಸ್): ಮಠ -ಮಂದಿರ, ದೇವಸ್ಥಾನಗಳು ,ಧಾರ್ಮಿಕ -ಜಾಗೃತಿ ,ಧಾರ್ಮಿಕ- ಸೇವೆ ನೀಡಿದಂತೆ , ಸಂಘ ಸಂಸ್ಥೆ ಗಳು ಅರೋಗ್ಯ ಸಾಮಾಜಿಕ ಶೈಕ್ಷಣಿಕ ಸೇವೆ ನೀಡಲು ಹಿಂದೆ ಬೀಳಬಾರದು ಎಂದು ತಜ್ಞ ವೈದ್ಯ ಡಾ ಅಣ್ಣಯ್ಯ ಕುಲಾಲ್ ಹೇಳಿದರು.
ದ.ಕ ಜಿಲ್ಲಾ ಕುಲಾಲರ ಮಾತೃ ಸಂಘ ಮತ್ತು ಡೆಲ್ಟಾ ಕಣ್ಣಿನ ಆಸ್ಪತ್ರೆಯ ಜಂಟಿ ಸಹಯೋಗ ದೊಂದಿಗೆ ಆಯೋಜಿಸಿದ ಉಚಿತ ಕಣ್ಣು ಪರೀಕ್ಷೆ, ಸಕ್ಕರೆ ಕಾಯಿಲೆ ತಪಾಸಣೆ ಹಾಗು ಉಚಿತ ಕಣ್ಣು ತಪಾಸಣಾ ಕಾರ್ಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ-ಶೈಕ್ಷಣಿಕ ಸೇವೆಗಾಗಿ ಸುಮಾರು ಒಂದು ಶತಮಾನದ ಹಿಂದೆ ಹುಟ್ಟಿಕೊಂಡು ಕುಂಬಾರ ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ದಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಬಡ ನಿರ್ಗತಿಕರ ನೋವು ನಲಿವು ಗಳಿಗೆ ಅರೋಗ್ಯ ಜಾಗೃತಿ ಸಾಮಾಜಿಕ ಶೈಕ್ಷಣಿಕ ಜಾಗೃತಿ ಮೂಲಕ ಮತ್ತಷ್ಟು ಒತ್ತು ಕೊಡಬೇಕೆಂದರು.
ಮಠ ಮಂದಿರ ದೇವಾಲಯಗಳು ಧಾರ್ಮಿಕ ಜಾಗೃತಿ ಮೂಡಿಸಿದಂತೆ. ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಬಲೀಕರಣಕ್ಕಾಗಿ ಹುಟ್ಟಿ ಕೊಂಡ ಜಾತಿ ಸಂಘ ಸಂಸ್ಥೆ ಗಳು ಮೂಲಬೂತ ಚಿಂತನೆಗಳಿಂದ ದೂರ ಹೋಗಬಾರದು. ಕಣ್ಣಿನ ಸಮಸ್ಯೆ ಹಾಗು ಸಕ್ಕರೆ ಕಾಯಿಲೆ ಸಮಸ್ಯೆಗಳು ಸಮಾಜದ ದೊಡ್ಡ ಆರೋಗ್ಯ ಸಮಸ್ಯೆ ಆಗಿದ್ದು ಕಾಯಿಲೆ ಉಲ್ಬಣ ಗೊಳ್ಳುವ ಮೊದಲೇ ಪತ್ತೆ ಹಚ್ಚುವುದು ಅನಿವಾರ್ಯ. ಕಣ್ಣು ದಾನ ಮಾಡಿ ಮತ್ತಷ್ಟು ಜನ ಕುರುಡರು ಹೊರ ಜಗತ್ತನ್ನ ನೋಡಲು ಅವಕಾಶ ಮಾಡಿಕೊಡ ಬೇಕೆಂದರು.
ಡೆಲ್ಟಾ ಸಂಸ್ಥೆಯ ಡಾ ನಾಗೇಂದ್ರ ನಾಯಕ್ ಸುಜೀರ್, ಜಿಲ್ಲಾ ಸಂಘದ ಅಧ್ಯಕ್ಷ ಸುಜೀರ್ ಕುಡುಪು, ಶ್ರೀದೇವಿ ದೇವಸ್ಥಾನದ ಶ್ರೀನಿವಾಸ್ ಪಡೀಲ್, ಸೇವಾದಳದ ಜೀವನ್ ಕುಮಾರ್, ಮಹಿಳಾ ಮಂಡಲದ ಲೀಲಾವತಿ, ದೇವಸ್ಥಾನದ ಅರ್ಚಕ ವೆಂಕಟರಮಣ ಭಟ್, ಸಂಘದ ಕಾರ್ಯದರ್ಶಿ ಪ್ರಸಾದ್ ಸಿದ್ಧಕಟ್ಟೆ, ಕೋಶಾಧಿಕಾರಿ ನ್ಯಾಯವಾದಿ ಕುಶಾಲಪ್ಪ ಕುಲಾಲ್, ಜಯರಾಮ್ ಕೆ ವಿ ಮುಂತಾದವರು ಉಪಸ್ಥಿತರಿದ್ದರು.