ಬೆಂಗಳೂರು(ಫೆ. ೩, ಕುಲಾಲ್ ವರ್ಲ್ಡ್ ನ್ಯೂಸ್) : ಕುಲಾಲ ಸಮಾಜ ಬೆಂಗಳೂರು(ರಿ) ಇದರ ಹದಿನೈದನೇ ಮಹಾಸಭೆ ಮತ್ತು ವಾರ್ಷಿಕೋತ್ಸವದ ಕಾರ್ಯಕ್ರಮ ಬೆಂಗಳೂರಿನ ಎ.ವಿ ವರದಾಚಾರ್ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಅಧ್ಯಕ್ಷರಾದ ಜಯೇಶ್ ಗೊವಿಂದ್ ಅವರು ಬೆಂಗಳೂರಿನ ಕುಲಾಲ ಸಮಾಜ ಮಾಡುತ್ತಿರುವ ಸಮುದಾಯ ಅಭಿವೃದ್ಧಿ ಕೆಲಸವನ್ನು ಶ್ಲಾಘಿಸಿದರು. ಸಮುದಾಯ ಸಂಘಟನೆಯಲ್ಲಿ ಯುವಕರ ಸಹಭಾಗಿತ್ವ ಹೆಚ್ಚಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ದ.ಕ ಕುಲಾಲ ಸಂಘದ ಅಧ್ಯಕ್ಷರಾದ ಎ.ಎನ್ ಕುಲಾಲ್, ಸಹಾಯಕ ಕಾರ್ಯಪಾಲಕ ಇಂಜೀನಿಯರ್ ಬಿ. ಎಸ್ ಕುಂಬಾರ್, ಕರ್ನಾಟಕ ಕುಂಭ ಕಲಾ ಸಂಘದ ಆರ್ ಎಮ್ ಶಶಿಕುಮಾರ್, ಕುಲಾಲ ಸಮಾಜದ ಅಧ್ಯಕ್ಷರಾದ ವಿಠ್ಠಲ ಕನೀರ್ ತೋಟ, ಕಾರ್ಯದರ್ಶಿ ಚಿನ್ನಪ್ಪ ಮಡಿಕೇರಿ ಎಂ, ಕೋಶಾಧಿಕಾರಿ ದಿನೇಶ್ ಎಸ್, ಉಪಾಧ್ಯಕ್ಷ ಬಿ.ರಾಮಣ್ಣ ಕುಲಾಲ್, ಆಂತರಿಕ ಲೆಕ್ಕ ಪರಿಶೋಧಕರಾದ ಶಂಕರ್ ಕುಲಾಲ್ ಜನ್ನಾಡಿ, ರಮಾನಂದ ಕುಲಾಲ್, ಸುರೇಶ್ ಕುಲಾಲ್ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷ್ಣ ಕುಲಾಲ್ ಆವರ್ಸೆ, ಮಂಜುನಾಥ್ ಹಿಲಿಯಾಣ, ರಶ್ಮಿತಾ ಕುಲಾಲ್ ಇನ್ನಿತರ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ನಡೆಸಲಾಯ್ತು. ಶಂಕರ್ ಕುಲಾಲ್ ಜನ್ನಾಡಿ ಧನ್ಯವಾದ ಸಮರ್ಪಿಸಿದರು. ಡಾ. ಆನಂದ ಕುಲಾಲ್ ಅವರು ಕಾರ್ಯಕ್ರಮ ನಿರೂಪಿಸದರು.
ಸಭಾ ಕಾರ್ಯಕ್ರಮದ ನಂತರ ಕುಲಾಲ ಸಮಾಜದ ಸದಸ್ಯರು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.