ಕುಲಾಲರ ಕಾಶಿ ಮೆಟ್ಟಿನಹೊಳೆಯಲ್ಲಿ ಕುಂಬಾರರ ಗಟ್ಟಿ ಧ್ವನಿ
ಕುಂದಾಪುರ(ಜ.೨೨, ಕುಲಾಲ್ ವರ್ಲ್ಡ್ ನ್ಯೂಸ್): ಕುಂದಾಪುರ ತಾಲೂಕಿನ ಹೊಸ ತಾಲೂಕಾಗಿ ಘೋಷಣೆಗೊಂಡಿರುವ ಬೈಂದೂರಿನ ಕುಲಾಲ- ಕುಂಬಾರ ಯುವವೇದಿಕೆಯ ಎರಡನೇ ಘಟಕ ಕುಂದಾಪುರದ ಕುಲಾಲರ ಕಾಶಿ ಎಂದೆನಿಸಿಕೊಂಡಿರುವ ಮೆಟ್ಟಿನಹೊಳೆಯಲ್ಲಿ ಕುಂದಾಪುರ ಕುಲಾಲ ಸಂಘದ ಗೌರವಾಧ್ಯಕ್ಷ ಡಾ ಎಂ ವಿ ಕುಲಾಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಣಿಲದ ಸ್ವಾಮೀಜಿ ಮೋಹನ್ದಾಸ ಸ್ವಾಮೀಜಿ ಆಶೀರ್ವಚನ ಮಾಡಿದರು. ಡಾ. ಎಂ. ಅಣ್ಣಯ್ಯ ಕುಲಾಲ್ ದಿಕ್ಷೂಚಿ ಭಾಷಣ ಮಾಡಿದರು. ಬಿಜೆಪಿ ಧುರೀಣ ಬಿ.ಎಂ ಸುಕುಮಾರ್ ಶೆಟ್ಟಿ, ಸ್ಥಳೀಯ ಕಾಂಗ್ರೆಸ್ ನಾಯಕ ಅಣ್ಣಪ್ಪ ಶೆಟ್ಟಿ, ಕುಲಾಲ ಮುಖಂಡರಾದ ನಿರಂಜನ್ ಸಲ್ವಾಡಿ, ಭೋಜ ಕುಲಾಲ್ ಹೆಬ್ರಿ, ಪದ್ಮ ಕುಂಬಾರ, ಮಹಾಬಲ ಮಾಸ್ಟರ್, ಹರೀಶ್ ಕಾರಿಂಜ, ಶಂಕರ ಕುಲಾಲ್, ಸತೀಶ್ ಕುಲಾಲ್ ನಡೂರು, ಹರೀಶ್ ಕುಲಾಲ, ಪ್ರಭಾಕರ್ ಬೈಂದೂರು ,ಮಂಜುನಾಥ್ ಜನ್ಸಾಲೆ, ಜಗನ್ನಾಥ ಕುಲಾಲ್, ಶ್ರೀಮತಿ ಚಂದು ಕುಲಾಲ್, ಸೀತಾ ರಾಮ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಮೆಟ್ಟಿನಹೊಳೆ ಯುವವೇದಿಕೆಯ ಗೌರವ ಸಲಹೆಗಾರರು, ಮಾರ್ಗದರ್ಶಕರು ಹಾಗು ಕುಂದಾಪುರದ ಹೊಂಬಾಡಿ, ಹೆಂಗವಲ್ಲಿ, ಜನ್ಸಾಲೆ, ವಕ್ವಾಡಿ ಘಟಕದ ನಾಯಕರು, ಮೆಟ್ಟಿನಹೊಳೆ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಯುವ ಬರಹಗಾರ ಸಂಘಟಕ ಮಂಜುನಾಥ ಹಿಲಿಯಾಣ ಮತ್ತಿತರರು ಕಾರ್ಯಕ್ರಮ ನಿರ್ವಹಿಸಿದರು.
—ಸಭೆಯ ತೀರ್ಮಾನಗಳು—
* ಯುವವೇದಿಕೆಯ ಯುವಕರು ಆಯಾಯ ತಾಲೂಕಿನ ಮಾತೃ ಸಂಘದ ನಂಟನ್ನು ಕಡಿದುಕೊಂಡು ದೂರವಾಗಬಾರದು. ಯುವವೇದಿಕೆಯು ಆಯಾಯ ಸಂಘಗಳ ಅವಿಭಾಜ್ಯ ಅಂಗವಾಗಿ ಕೆಲಸ ಮಾಡಬೇಕು.
* ಈ ಬಾರಿ ಕರಾವಳಿಯಲ್ಲಿ ಕುಲಾಲರು ಎಂಬ ರಾಜಕೀಯ ಹಕ್ಕೊತ್ತಾಯ ಆರಂಭಿಸಬೇಕು.ಸಂಘಗಳ ಬೈಲಾದಲ್ಲಿ ಇರುವ ಸೇವಾದಳದ ಬದಲು ಯುವವೇದಿಕೆ ಅಂತ ಮಾಡಿ ಯುವ ಜನತೆಗೆ ಸಂಘಗಳಲ್ಲಿ ಅವಕಾಶ ಮಾಡಿಕೊಟ್ಟು ದ್ವೀತಿಯ ಹಾಗು ತೃತೀಯ ಹಂತದ ನಾಯಕರನ್ನ ಬೆಳೆಸಬೇಕು.
* ಕರಾವಳಿಯ ಯುವ ನಾಯಕರನ್ನ ರಾಜಕೀಯವಾಗಿ ಬೆಳೆಸಲು ಕುಲಾಲ್ ಕಿಂಗ್ ಮೇಕರ್ಸ್ ತಂಡವನ್ನ ಡಾ ಎಂ ವಿ ಕುಲಾಲ್ ಹಾಗೂ ಡಾ ಎಂ ಅಣ್ಣಯ್ಯ ಕುಲಾಲ್ ಇನ್ನಿತರ ಹಿರಿಯ ರಾಜಕೀಯ ಚಿಂತಕರ ಮಾರ್ಗದರ್ಶನದಲ್ಲಿ ರಚಿಸಲು ಚಿಂತನೆ.
* ಯುವ ವೇಧಿಕೆ ಹುಟ್ಟಿ ಕೊಂಡ ಪರಿಸರದಲ್ಲಿ ಯಾವುದೇ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸ ನಿಲ್ಲಿಸದಂತೆ ಹಾಗೂ ವೈದ್ಯಕೀಯ ಚಿಕಿತ್ಸೆ ದೊರಕದೇ ಇರುವ ಬಡವರನ್ನು ಗುರುತಿಸಿ ನೋಡಿಕೊಳ್ಳುವ ಜವಾಬ್ದಾರಿ ಯುವವೇದಿಕೆಯು ವಹಿಸಿಕೊಳ್ಳಬೇಕು.
* ಶಿಕ್ಷಣ ಹಾಗು ರಾಜಕೀಯ ಅವಕಾಶಗಳಿಂದ ಮಾತ್ರ ಸಮುದಾಯ ಬೆಳೆಯುತ್ತದೆ. ಸಂಘ ಸಂಸ್ಥೆ ಗಳಿಂದ ವಿದ್ಯಾರ್ಥಿವೇತನ ಪಡೆದವರು ಸಂಘ ಸಂಸ್ಥೆಗಳನ್ನ ಮರೆಯಬಾರದು.
ಯುವವೇದಿಕೆಯು ದಶಮಾನೋತ್ಸವದ ಅಂಗವಾಗಿ ಜಿಲ್ಲೆಯ ಪ್ರತೀ ಜಿಲ್ಲಾ ಪಂಚಾಯತ್ ಕ್ಷೇತ್ರ ದಲ್ಲಿ ಒಂದು ತಾಲೂಕು ಘಟಕ ಹಾಗು ತಾಲೂಕು ಸಂಘದ ಸುಪರ್ದಿಯಲ್ಲಿ ರಚಿಸಿ ರಾಜ್ಯಕ್ಕೆ ಮಾದರಿಯಾಗುವುದು. ಯುವವೇದಿಕೆಯನ್ನು ರಾಜ್ಯದ ಇತರ ಜಿಲ್ಲೆಗಳ ಸಂಘಗಳ ಜೊತೆ ಸೇರಿ ಅಲ್ಲಲ್ಲಿ ಗಟ್ಟಿಯಾಗಿ ಬೆಳೆಸುವುದು.
* ಹೊಸ ತಾಲೂಕು ಆಗಲಿರುವ ಬೈಂದೂರು ಕ್ಷೇತ್ರದಲ್ಲಿ ಒಂದು ಕುಲಾಲ ಸಂಘ ಮಾಡಿ ಅದಕ್ಕೆ ನಿವೇಶನ ಕಟ್ಟಡ ಮತ್ತು ಹಣಕಾಸು ಅನುದಾನ ಪಡೆಯಲು ಹೋರಾಟ ಮಾಡಲು ಚಿಂತನೆ
* ಮೆಟ್ಟಿನ ಹೊಳೆಯಲ್ಲಿ ಕುಂಬಾರಿಕಾ ಗುಡಿಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಒಂದು ದೊಡ್ಡ ಮಡಿಕೆ ತಯಾರಿ ಘಟಕ ಮಾಡಲು ಸರಕಾರಕ್ಕೆ ಒತ್ತಾಯಿಸಲು ಕರೆ.
* ರಾಜ್ಯದಲ್ಲೇ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಕುಲಾಲ- ಕುಂಬಾರ ಸಮುದಾಯದ ಸಂಪೂರ್ಣ ಜನಗಣತಿ ಮಾಡಿ ಆ ಮೂಲಕ ಜರುಗುವ ಬೃಹತ್ ಹಕ್ಕೊತ್ತಾಯ ಸಮಾವೇಶ ಹಾಗು ಮಾಣಿಲದ ನಾಗಮಂಡಲ ಮತ್ತು ಶ್ರೀನಿವಾಸ ಕಲ್ಯಾಣೋತ್ಸವವನ್ನು ಯಶಸ್ವಿಗೊಳಿಸಲು ಬೈಂದೂರು-ಕುಂದಾಪುರ-ಉಡುಪಿ-ಪೆರ್ಡೂರು- ಮೆಕ್ಕೆಕಟ್ಟು -ಬ್ರಹ್ಮಾವರ-ಕಾರ್ಕಳ-ನೀರಮಾರ್ಗ ಕುಲಾಲ ಸಂಘಗಳ ಹಾಗು ಯುವವೇದಿಕೆಯ ಎಲ್ಲಾ ನಾಯಕರುಗಳ ಪಣ.
* ಕುಂದಗನ್ನಡ ಉಳಿಸಿ ಬೆಳೆಸಿ ಕುಂದಗನ್ನಡಕ್ಕೆ ಅಧ್ಯಯನ ಪೀಠ ರಚಿಸಲು ಊರು ಪರ ಊರಲ್ಲಿ ಇರುವ ಕುಂದ ಗನ್ನಡ ಅಭಿಮಾನಿಗಳು ಪ್ರಯತ್ನಿಸಲು ಕರೆ
* ಒಬ್ಬರಿಗೊಬ್ಬರು ಕಾಲೆಳೆಯುವ ಹೀಯಾಳಿಸುವ ಕೆಸರೆರೆಚುವ ಕೆಲಸ ಮಾಡುವವರು ನಿಲ್ಲಿಸಬೇಕು. ಫೇಸ್ ಬುಕ್ ವಾಟ್ಸ್ ಆಪ್ ಮುಂತಾದ ಸಾಮಾಜಿಕ ಜಾಲತಾಣದಿಂದ ಹೊರಬಂದು ಕುಂಭ ನಿಗಮ ಚಳುವಳಿ ಸರ್ವಜ್ಞ ಚಳುವಳಿ ರಾಜಕೀಯ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುವ ಶಕ್ತಿ ತೋರಿಸಬೇಕು.
* ಕೇಂದ್ರ ಸಮಿತಿ ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲೂಕು ಹಾಗು ಜಿಲ್ಲಾ ಪಂಚಾಯತ್ ಘಟಕ ಸಮಿತಿಗಳು ದಶಮಾನೋತ್ಸವದ ಅಂಗವಾಗಿ
ಜರುಗಲಿರುವ ಕುಂಭ ಮೇಳದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಮನವಿ
* ಸಂಘಟಕರು-ಸಾಧಕರು-ಪ್ರತಿಭಾವಂತರು-ಕುಲ ಕಸುಬು ಮಾಡುವವರು- ಮುಂತಾವದವರನ್ನು ಗುರುತಿಸಿ ಸನ್ಮಾನಿಸಿ ಆತ್ಮಸ್ಥೈರ್ಯ ತುಂಬಲಾಯಿತು.