ಪುತ್ತೂರು(ಜ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ಡಿಸೇಂಬರ್ 27ರಿಂದ 31ರವರೆಗೆ ನಡೆದ 20ನೇ ರಾಷ್ಟ್ರಮಟ್ಟದ ಕಿವುಡರ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಯಶಸ್ವಿ ಕುಲಾಲ್ ಅವರು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ವಿವಿಧ ಕಡೆಯ ಸುಮಾರು 200 ಸ್ಪರ್ಧಿಗಳು ಭಾಗವಹಿಸಿದ್ದು, ಇದಕ್ಕಾಗಿ ನಡೆದ 9 ಸುತ್ತುಗಳಲ್ಲಿ 6 ಸುತ್ತುಗಳಲ್ಲಿ ಯಶಸ್ವಿ ಜಯ ಗಳಿಸಿದ್ದಾರೆ. ಜೀನಿಯಸ್ ಚೆಸ್ ಸ್ಕೂಲ್ ನ ಶಿಕ್ಷಕ ಸತ್ಯಪ್ರಸಾದ್ ಕೋಟೆ ಅವರ ಬಳಿ ತರಬೇತಿ ಪಡೆಯುತ್ತಿರುವ ಯಶಸ್ವಿ ಅವರು, ಕುದ್ಮಾನ್ ಪೇರಮೊಗರು ತಿಮ್ಮಪ್ಪ ಎಂ ಕುಲಾಲ್ ಮತ್ತು ಯಶೋಧ ದಂಪತಿಯ ಸುಪುತ್ರಿ.


