ಕಾರ್ಕಳ(ಜ.೧೬, ಕುಲಾಲ್ ವರ್ಲ್ಡ್ ನ್ಯೂಸ್): ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘದ ಮಾಸಿಕ ಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಹಲವಾರು ವಿಷಯಗಳ ಮಂಡನೆ ನಡೆದು ಚರ್ಚೆಯಾದವು.
ಕರಾವಳಿ ಕುಲಾಲ ಕುಂಬಾರರ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾವೇಶ ಮತ್ತು ಹಕ್ಕೊತ್ತಾಯ ಸಮಿತಿಯ ಅಧ್ಯಕ್ಷರಾದ ಹರೀಶ್ ಕಾರಿಂಜರವರು ಬೆಳ್ತಂಗಡಿಯಲ್ಲಿ ಫೆ. 4ರಂದು ನಡೆಯುವ ಬೃಹತ್ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮದ ಉದ್ದೇಶ, ಅಗತ್ಯತೆ ಹಾಗೂ ಅದರ ಸಿದ್ಧತೆಗಳ ಬಗ್ಗೆ ಮಾತನಾಡುತ್ತಾ ಕಾರ್ಕಳ ಕುಲಾಲ ಸಂಘದ ಸಂಪೂರ್ಣ ಸಹಕಾರವನ್ನು ಕೇಳಿದರು. ಕಾರ್ಕಳ ತಾಲೂಕಿನಿಂದ ಸರಿ ಸುಮಾರು 20,ರಿಂದ 30ಸಾವಿರ ಜನ ಸೇರಿಸುವ ಗುರಿಯನ್ನು ನೀಡಿ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಗಳ ಸಹಕಾರ ಕೋರಿದರು. ಗ್ರಾಮಸಮಿತಿ ಸಭೆಗಳಲ್ಲಿ ಈ ವಿಚಾರವಾಗಿ ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಆ ಮೂಲಕ ಸಮಿತಿಯ ಸದಸ್ಯರನ್ನು ಬೃಹತ್ ಸಭೆಗೆ ಭಾಗವಹಿಸುವಂತೆ ಪ್ರೇರೇಪಿಸಬೇಕೆಂದು ನಿರ್ಣಯಿಸಲಾಯಿತು. ಈ ಕುರಿತು ಗ್ರಾಮವಾರು ಸಭೆಗಳ ದಿನಾಂಕಗಳನ್ನೂ ನಿಗದಿ ಮಾಡಲಾಯಿತು.
ನಂತರ ಜನಬಿಂಬ ಪತ್ರಿಕೆಯ ಸಹ ಸಂಪಾದಕ ವಸಂತ್ ಕುಲಾಲ್ ರವರು ತಮಗಾದ ಅನ್ಯಾಯದ ಬಗ್ಗೆ ತಿಳಿಸುತ್ತಾ ಸ್ಥಳೀಯ ಉದ್ಯಮಿಯೊಬ್ಬರು ತಮ್ಮ ಪತ್ರಿಕೆಯಲ್ಲಿ ತನ್ನ ವಿರುದ್ಧ ಹೆಸರು ಉಲ್ಲೇಖಿಸಿ ತೇಜೋವಧೆ ಮಾಡಿರುವುದು,ತಮ್ಮ ಪತ್ನಿಯ ಹೆಸರಲ್ಲಿ ಪತ್ರಿಕೆಯ ಶಿರೋನಾಮೆ ಒದಗಿಸುವಲ್ಲಿ ಅಡ್ಡಿಪಡಿಸಿ ತೊಂದರೆ ಕೊಡುತ್ತಿರುವ ಬಗ್ಗೆ ಪ್ರಸ್ತಾಪಿಸಿ ಸಂಘದ ಸಹಕಾರವನ್ನು ಕೇಳಿದರು. ಮಹಿಳಾ ದೌರ್ಜನ್ಯದ ಅಡಿಯಲ್ಲಿ ಮಹಿಳಾ ಸಂಘವು ಜಿಲ್ಲಾಧಿಕಾರಿ ,ಅರಕ್ಷಕರ ಠಾಣೆ ಹಾಗೂ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳಿಗೆ ಲಿಖಿತ ದೂರು ನೀಡುವುದು ಹಾಗೂ ಸಂಘದ ಖಂಡನಾ ನಿರ್ಣಯವನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ನಿರ್ಣಯಿಸಲಾಯಿತು
.
ಖ್ಯಾತ ನಾಟಕ ರಚನಕಾರ ಸುರೇಶ್ ಮೂಲ್ಯ ಇವರು ಆಗಮಿಸಿ ತಮ್ಮ ಪರಿಚಯವನ್ನು ಮಾಡುತ್ತಾ ಕಾರ್ಕಳ ಕುಲಾಲರ ಸಂಘಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಸಂಘದ ಪದಾಧಿಕಾರಿಗಳು,ಬೆಳ್ತಂಗಡಿ ಯುವ ವೇದಿಕೆ ಅಧ್ಯಕ್ಷ ರಾದ ಲೋಕೇಶ್ ಕುಲಾಲ್, ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಹಾಗೂ ಹೊಸ್ಮಾರು ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.