ಮಂಗಳೂರು(ಜ.೧೬, ಕುಲಾಲ್ ವರ್ಲ್ಡ್ ನ್ಯೂಸ್): ತಾಲೂಕು ಜಿಲ್ಲೆ, ವಿಭಾಗ, ರಾಜ್ಯಮಟ್ಟದಲ್ಲಿ ಶಾಟ್ ಪುಟ್ ,ಹ್ಯಾಮ್ಮರ್ ಥ್ರೋ , ಡಿಸ್ಕಸ್ ಎಸೆತ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ 25 ಕ್ಕೂ ಹೆಚ್ಚು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ರಾಷ್ಟ್ರಮಟ್ಟದ ಮಾಸ್ಟರ್ಸ್ ಸ್ಪರ್ಧೆಗೆ ಆಯ್ಕೆಯಾದ ಚಂಚಲಾಕ್ಷಿ .ಎಸ್. ಕುಲಾಲ್ ಅವರನ್ನು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಕ್ರೀಡಾ ಭಾರತಿ ಆಯೋಜಿಸಿದ ವಾಲಿಬಾಲ್ ಹಾಗೂ ಈಜು ಸ್ಪರ್ಧೆ ಕ್ರೀಡಾ ಕೂಟದಲ್ಲಿ ಸನ್ಮಾನಿಸಲಾಯಿತು.
ಖ್ಯಾತ ಚಿತ್ರನಟಿ, ವಿಧಾನ ಪರಿಷತ್ ಸದಸ್ಯೆ ತಾರಾ, ಕಲ್ಲಡ್ಕ ಡಾ. ಪ್ರಭಾಕರ್ ಭಟ್, ಸಂಸದ ನಳೀನ್ ಕುಮಾರ್ ಕಟೀಲ್, ಬಿಜೆಪಿ ಆರೋಗ್ಯಪ್ರಕೋಷ್ಠ ದ ರಾಜ್ಯ ಸಹ ಸಂಚಾಲಕ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಮಾಜಿ ಸಚಿವ, ಕ್ರೀಡಾ ಭಾರತಿಯ ಸಂಚಾಲಕ ನಾಗರಾಜ್ ಶೆಟ್ಟಿ, ಉದ್ಯಮಿ, ಬಿಜೆಪಿ ನಾಯಕ ಬದ್ರಿನಾಥ್
ಕಾಮತ್, ಉದ್ಯಮಿ, ಬಿಜೆಪಿ ನಾಯಕ ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಕೋಡಿಕಲ್ ನಲ್ಲಿ ನರ್ಸರಿ ಶಾಲೆ ನಡೆಸುತ್ತಿರುವ ಚಂಚಲಾಕ್ಷಿ ಸುಕುಮಾರ್ ಕುಲಾಲ್ ಅವರು ದ.ಕ ಜಿಲ್ಲಾ ಕುಲಾಲರ ಯಾನೆ ಮೂಲ್ಯರ ಮಾತೃ ಸಂಘ ಮಹಿಳಾ ಮಂಡಳಿ ಹಾಗೂ ಕುಲಾಲ ಯುವವೇದಿಕೆಯ ಮಹಿಳಾ ವಿಭಾಗದ ಹಿರಿಯ ಸದಸ್ಯರು.




